ದಕ್ಷಿಣ ಆಫ್ರಿಕಾದಿಂದ ರಾಜ್ಯಕ್ಕೆ ಬಂದು ನಾಪತ್ತೆಯಾದವರ ಪತ್ತೆಗೆ ಕ್ರಮ: ಬೊಮ್ಮಾಯಿ

Prasthutha|

ಬೆಂಗಳೂರು: ರಾಜ್ಯಕ್ಕೆ ಒಮಿಕ್ರಾನ್ ಪ್ರವೇಶ ಹಿನ್ನೆಲೆ ಸರ್ಕಾರ ಕಟ್ಟೆಚ್ಚರವಹಿಸಿದೆ. ಈ ನಿಟ್ಟಿನಲ್ಲಿ ಇಂದು ಕ್ಲಸ್ಟರ್ ಗಳಲ್ಲಿ ಸರಿಯಾಗಿ ಕಾರ್ಯ ನಿಭಾಯಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

- Advertisement -

ಆರ್.ಟಿ.ನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಶಾಲಾ- ಕಾಲೇಜುಗಳಲ್ಲಿ ಮತ್ತು ಅಪಾರ್ಟ್ ಮೆಂಟ್ ನಲ್ಲಿ ಕ್ಲಸ್ಟರ್ ಇವೆ. ಅಲ್ಲಿ ಕೋವಿಡ್ ಪರೀಕ್ಷೆ ನಡೆಸಿ ಚಿಕಿತ್ಸೆಗೆ ಸೂಚನೆ ನೀಡಿದ್ದೇನೆ. ಈ ಮೊದಲು ಹತ್ತು ಕೇಸ್ ಇದ್ದರೆ ಕ್ಲಸ್ಟರ್ ನಿರ್ಮಾಣ ಮಾಡಲಾಗುತ್ತಿತ್ತು. ಈಗ ಮೂರು ಕೇಸ್ ಇದ್ದರೂ ಕ್ಲಸ್ಟರ್ ಮಾಡುತ್ತಿದ್ದೇವೆ. ಅಲ್ಲದೆ ಕ್ಲಸ್ಟರ್ ಅಪಾರ್ಟ್‌ಮೆಂಟ್ ಗಳಲ್ಲಿ ಇರುವವರಿಗೆ ಟೆಸ್ಟ್, ಚಿಕಿತ್ಸೆ, ಲಸಿಕೆ ಹಾಕಲು ಸೂಚಿಸಲಾಗಿದೆ. ಎರಡು ಡೋಸ್ ಆಗಿರುವ ಹೊರಗಿನ ವ್ಯಕ್ತಿಗಳನ್ನು ಮಾತ್ರ ಕ್ಲಸ್ಟರ್ ಗಳಲ್ಲಿರುವ ವ್ಯಕ್ತಿಗಳನ್ನು ಭೇಟಿ ಮಾಡಬೇಕು ಎಂದು ಸಿಎಂ ತಿಳಿಸಿದರು.

ಒಮಿಕ್ರಾನ್ ಅಧ್ಯಯನ ವರದಿ: ಒಮಿಕ್ರಾನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಂದಿದೆ. ಅದರ ಸೂಕ್ತ ಚಿಕಿತ್ಸೆಯ ಮಾದರಿ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ. ಇದು ಹರಡುವ ವೇಗ ಹೆಚ್ಚು. ಆದರೆ, ಪರಿಣಾಮಕಾರಿ ಅಲ್ಲ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಧ್ಯಯ‌ಡನ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ ಎಂದರು.

- Advertisement -

ಹತ್ತು ಜನ ದಕ್ಷಿಣ ಆಫ್ರಿಕಾದಿಂದ ಬಂದವರು‌ ನಾಪತ್ತೆ ವಿಚಾರವಾಗಿ ಪ್ರತಿಕ್ರಿಯಸಿದ ಅವರು, ಅವರನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ. ಇದರ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ ಎಂದರು.

ಪೊಲೀಸರ ಕುರಿತು ಆರಗ ಜ್ಞಾನೇಂದ್ರ ಹೇಳಿಕೆ : ಪೊಲೀಸರ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಆಕ್ಷೇಪಾರ್ಹ ಪದಗಳ‌ ಬಳಕೆ ವಿಚಾರವಾಗಿ ಮಾತನಾಡಿದ ಸಿಎಂ, ಗೃಹ ಸಚಿವರ ಜತೆ ಇದರ ಬಗ್ಗೆ ಮಾತಾಡಿದ್ದೇನೆ. ಈಗಾಗಲೇ ಗೃಹ ಸಚಿವರು ಸ್ಪಷ್ಟೀಕರಣ ಕೊಟ್ಟಿದ್ದಾರೆ. ಪೊಲೀಸರ ಬಗ್ಗೆ ಗೃಹ ಸಚಿವರಿಗೆ ಬಹಳ ಕಾಳಜಿ ಇದೆ. ಎಲ್ಲ ಪೊಲೀಸರಿಗೂ ಆರಗ ಜ್ಞಾನೇಂದ್ರ ಆ ಮಾತುಗಳನ್ನು ಹೇಳಲಿಲ್ಲ. ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ ಕೆಲವು ಪೊಲೀಸರಿಗೆ ಹಾಗೆ ಮಾತಾಡಿರುವುದಾಗಿ ತಿಳಿಸಿದ್ದಾರೆ. ಅವರು ಒಳ್ಳೇ ಗೃಹ ಸಚಿವರು. ಪೊಲೀಸರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಆಕ್ಸಿಜನ್ ಕೊರತೆಯಿಂದ ಸಾವುಗಳಾದ‌ ಬಗ್ಗೆ ಪಂಜಾಬ್ ಬಿಟ್ಟು ಬೇರೆ ಯಾವುದೇ ರಾಜ್ಯಗಳು ವರದಿ ಕಳಿಸಿಲ್ಲ ಎಂಬ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಂಸತ್ ನಲ್ಲಿ ಕೇಂದ್ರದ ಆರೋಗ್ಯ ಸಚಿವರು ಯಾವ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ ಎಂಬುದು ಗೊತ್ತಿಲ್ಲ. ಸಂಸತ್ ನಲ್ಲಿ ಯಾವುದೋ ನಿರ್ದಿಷ್ಟ ಪ್ರಶ್ನೆಗೆ ಉತ್ತರ ಕೊಟ್ಟಿರಬಹುದು. ಯಾವ ಸಂದರ್ಭದಲ್ಲಿ ಆ ಉತ್ತರ ಕೊಟ್ಟಿದ್ದಾರೋ‌ ಗೊತ್ತಿಲ್ಲ ಎಂದು ತಿಳಿಸಿದರು.

Join Whatsapp