ಮಂಗಳೂರು: ಜುವೆಲ್ಲರಿ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯವಾಗಿ ಗುರುತಿಸಿಕೊಂಡಿರುವ ಸಿಟಿ ಗೋಲ್ಡ್ ನ ಅಂಗ ಸಂಸ್ಥೆಯಾದ ಕೆವಾ ಬಾಕ್ಸ್ ನ ಅಧಿಕೃತ ಅನಾವರಣ ಅ. 2ರಂದು ಆಯೋಜಿಸಲಾಗಿದೆ.
ಸಂಸ್ಥೆಯ ಅಧಿಕೃತ ಅನಾವರಣದ ಅಂಗವಾಗಿ ನಗರದ ನೆಕ್ಸಸ್ ಮಾಲ್ (ಫಿಝಾ ಮಾಲ್) ನಲ್ಲಿ ‘ಸಾಂಸ್ಕೃತಿಕ ವೈಶಿಷ್ಟ: ನಮಸ್ತೇ ಇಂಡಿಯಾ’ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕೆವಾ ಬಾಕ್ಸ್ ನ ಸ್ಥಾಪಕ ಸಿಇಒ ಮುಹಮ್ಮದ್ ದಿಲ್ಶಾದ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಸಂಜೆ 4 ಗಂಟೆಗೆ ಆರಂಭವಾಗುವ ಈ ವಿಶೇಷ ಕಾರ್ಯಕ್ರಮದಲ್ಲಿ ಬಾಲಿವುಡ್ ಸೆಲೆಬ್ರಿಟಿ ಡೈಸಿ ಶಾ ಭಾಗವಹಿಸಲಿದ್ದಾರೆ. ಖ್ಯಾತ ಸಾಂಸ್ಕೃತಿಕ ತಂಡವಾದ ಹರಿ ಮತ್ತು ಚೇತನಾ ಅವರಿಂದ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದೇ ವೇಳೆ ಭಾರತದ ಫ್ಯಾಶನ್ ಉದ್ಯಮದ ಪ್ರಮುಖ ದಿಗ್ಗಜರಿಂದ ಫ್ಯಾಶನ್ ಶೋ ಕೂಡಾ ಆಯೋಜಿಸಲಾಗಿದೆ ಎಂದು ಮುಹಮ್ಮದ್ ದಿಲ್ ಶಾದ್ ವಿವರಿಸಿದರು.
ವಿಶ್ವದ ಆಭರಣ ಕೇಂದ್ರಗಳಾಗಿ ಗುರುತಿಸಿಕೊಂಡಿರುವ ಭಾರತ, ಇಟಲಿ ಮತ್ತು ಟರ್ಕಿಯ ಹಗುರ ಹಾಗೂ ನವನವೀನ ಕಲಾತ್ಮಕ ವಿನ್ಯಾಸಗಳಿಂದ ರೂಪಿಸಲಾದ ಚಿನ್ನಾಭರಣಗಳ ಅಪಾರ ಸಂಗ್ರಹವನ್ನು ಕೆವಾಬಾಕ್ಸ್ ಹೊಂದಿದೆ. ದುಬೈನಲ್ಲಿ ಪ್ರಧಾನ ಕಚೇರಿ ಹೊಂದಿರುವ ಬಹುರಾಷ್ಟ್ರೀಯ ಸಂಘಟಿತ ಸಂಸ್ಥೆಯಾದ ಪ್ರೈಡ್ ಗ್ರೂಪ್ ನೊಂದಿಗೆ ಸಹಭಾಗಿತ್ವ ಮತ್ತು ಸಿಟಿಗೋಲ್ಡ್ ಮತ್ತು ಡೈಮಂಡ್ಸ್ ಗ್ರೂಪ್ನ ಆಶ್ರಯದಲ್ಲಿ ಕೆವಾಬಾಕ್ಸ್ ಆರು ತಿಂಗಳ ಹಿಂದೆ ನೆಕ್ಸಸ್ ಮಾಲ್ನಲ್ಲಿ ಕಾರ್ಯಾರಂಭಿಸಿದೆ ಎಂದು ಅವರು ಹೇಳಿದರು.
ಫ್ಯಾಶನ್ ಆಭರಣ ಪ್ರಿಯರ ಬೇಡಿಕೆಗಳನ್ನು ಪೂರೈಸುವ ನಿಟ್ಟಿನಲ್ಲಿ ಕೆವಾಬಾಕ್ಸ್ ತನ್ನ ಮಳಿಗೆಗಳನ್ನು ಶೀಘ್ರವೇ ದುಬೈ, ಬೆಂಗಳೂರು ಮತ್ತು ಇತರ ಮಹಾನಗರಗಳಲ್ಲಿ ವಿಸ್ತರಿಸಲು ಮುಂದಾಗಿದೆ. ಮುಂದಿನ ವರ್ಷದಲ್ಲಿ ಭಾರತಾದ್ಯಂತ 50 ಮಳಿಗೆಗಳನ್ನು ತೆರೆಯುವ ಉದ್ದೇಶ ಹೊಂದಲಾಗಿದ್ದು, ವೇಗವಾಗಿ ಬೆಳೆಯುತ್ತಿರುವ ನೂತನ ಜುವೆಲ್ಲರಿ ಬ್ರಾಂಡ್ ಆಗಿ ಈಗಾಗಲೇ ಕೆವಾ ಬಾಕ್ಸ್ ಅಂತಾರಾಷ್ಟ್ರೀಯ ಐಕಾನಿಕ್ ಪ್ರಶಸ್ತಿಯನ್ನು ಕೂಡಾ ಪಡೆದಿದೆ ಎಂದು ಮುಹಮ್ಮದ್ ದಿಲ್ ಶಾದ್ ತಿಳಿಸಿದರು.
ಗೋಷ್ಠಿಯಲ್ಲಿ ನೌಶಾದ್, ಸಂತೋಷ್ ಉಪಸ್ಥಿತರಿದ್ದರು.