ಅತ್ಯಾಚಾರ, ಲೈಂಗಿಕ ಕಿರುಕುಳ ಆರೋಪ: ಬಿಜೆಪಿ ಶಾಸಕ , ಮಗನ ವಿರುದ್ಧ ಎಫ್ ಐಆರ್  ದಾಖಲು

Prasthutha|

ಆಗ್ರಾ : ಅತ್ಯಾಚಾರ, ಹಲ್ಲೆ  ಮತ್ತು ಲೈಂಗಿಕ ಕಿರುಕುಳ ಆರೋಪದ ಮೇಲೆ ಉತ್ತರ ಪ್ರದೇಶ ಬಿಜೆಪಿ ಶಾಸಕ ಛೋಟೆ ಲಾಲ್ ವರ್ಮಾ ಮತ್ತು ಆತನ ಪುತ್ರ ಲಕ್ಷ್ಮಿ ಕಾಂತ್ ವರ್ಮಾ ವಿರುದ್ಧ ಆಗ್ರಾ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.

ಮಹಿಳೆಯೊಬ್ಬಳು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

- Advertisement -

2003ರಲ್ಲಿ ಲಕ್ಷ್ಮಿಕಾಂತ್ ಅವರು ಒಬ್ಬರೇ ಇದ್ದಾಗ ತನ್ನನ್ನು ನಿವಾಸಕ್ಕೆ ಕರೆಸಿ ಪ್ರಜ್ಞೆ ತಪ್ಪಿಸಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆಕೆ ಹೇಳಿಕೊಂಡಿದ್ದಾಳೆ. ಆತ ಈ ಕೃತ್ಯದ ವೀಡಿಯೊಗಳನ್ನು ಮಾಡಿರುವುದಲ್ಲದೆ  ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿರುವುದಾಗಿಯೂ ಆಕೆ ದೂರಿನಲ್ಲಿ ತಿಳಿಸಿದ್ದಾಳೆ.

- Advertisement -