ಸುಳ್ಯದಲ್ಲಿ ಮತ್ತೆ ಕಂಪಿಸಿದ ಭೂಮಿ!

Prasthutha|

- Advertisement -

ಸುಳ್ಯ: ದಕ್ಷಿಣ ಕನ್ನಡ ದ ಗಡಿ ಪ್ರದೇಶಗಳು ಮತ್ತು ಕೊಡಗಿನ ಹಲವು ಕಡೆಗಳಲ್ಲಿ ಭಾನುವಾರ ಸಂಜೆ 6.15ರ ಸುಮಾರಿಗೆ ಭೂಮಿ ಕಂಪಿಸಿದೆ ಎಂದು ತಿಳಿದು ಬಂದಿದೆ.

ಸುಳ್ಯದ ಕಲ್ಮಕಾರಿನ ಮೆಂಟೆಕಜೆ, ಗುಳಿಕ್ಕಾನ ಪ್ರದೇಶದಲ್ಲಿ ಶಬ್ದ ಹಾಗೂ ಕಂಪನ ಹೆಚ್ಚಾಗಿ ಅನುಭವವಾಗಿದೆ. ಕೊಲ್ಲಮೊಗ್ರದವರೆಗೂ ಈ ಶಬ್ದ ಕೇಳಿಸಿದೆ ಎನ್ನಲಾಗಿದೆ. ಮಾತ್ರವಲ್ಲದೇ ಕಲ್ಲುಗುಂಡಿಯ ಚಟ್ಟೆಕಲ್ಲು, ಕೊಯನಾಡಿನ ಮಂಗಳಪಾರೆ ಎಂಬಲ್ಲಿ ಭೂಮಿ ಕಂಪಿಸಿದೆ ಎಂದು ಅಲ್ಲಿನ ಸ್ಥಳೀಯರು ಹೇಳುತ್ತಿದ್ದಾರೆ.

- Advertisement -

ಆದರೆ ಭೂ ವಿಜ್ಞಾನ ಅಧಿಕಾರಿಗಳು ಈ ಬಗ್ಗೆ ಇನ್ನೂ ದೃಢಪಡಿಸಿಲ್ಲ.

Join Whatsapp