ವಿದ್ಯಾರ್ಥಿಗಳ ಹೆಸರಿನಲ್ಲಿ NEET ಪರೀಕ್ಷೆ ಬರೆದ ಪರಿಣಿತರು: ಬೃಹತ್ ಜಾಲವನ್ನು ಭೇದಿಸಿದ CBI

Prasthutha|

►ಒಂದು ಸೀಟಿಗೆ 20ಲಕ್ಷ ಡೀಲ್, ಎಂಟು ಮಂದಿಯ ಬಂಧನ

- Advertisement -

ನವದೆಹಲಿ: NEET ಪರಿಕ್ಷೆಯಲ್ಲಿ ವಿದ್ಯಾರ್ಥಿಗಳ ಸೋಗಿನಲ್ಲಿ ಪರಿಣಿತರು ಪರೀಕ್ಷೆ ಬರೆದು ಸೀಟು ಗಿಟ್ಟಿಸಿಕೊಡುವ ಬೃಹತ್ ಜಾಲವನ್ನು ಕೇಂದ್ರೀಯ ತನಿಖಾ ದಳ (CBI) ಭೇದಿಸಿದ್ದು,  ಎಂಟು ಜನರನ್ನು ಬಂಧಿಸಿದೆ.

ಉತ್ತರ ಪ್ರದೇಶ, ಬಿಹಾರ,  ಮಹಾರಾಷ್ಟ್ರ ಮತ್ತು ಹರಿಯಾಣದಾದ್ಯಂತ ಈ ದಂಧೆ ನಡೆಯುತ್ತಿದ್ದು ,ವೈದ್ಯಕೀಯ ಕೋರ್ಸ್ ಗಳಲ್ಲಿ  ಸೀಟುಗಳನ್ನು ಧಕ್ಕಿಸಿಕೊಳ್ಳಲು ಈ ದಂಧೆ ನಡೆಸಲಾಗುತ್ತಿದೆ. ಕೇಂದ್ರೀಯ ತನಿಖಾ ದಳ ಈ ದಂಧೆ ಪತ್ತೆ ಮಾಡಿದ್ದು, ವಿದ್ಯಾರ್ಥಿಗಳ ಬದಲಿಗೆ ಬೇರೋಬ್ಬ ವ್ಯಕ್ತಿ ಪರೀಕ್ಷೆಯಲ್ಲಿ ಹಾಜರಾಗಿ ನೀಟ್ ಪರೀಕ್ಷೆಗೆ ಉತ್ತರವನ್ನು ಬರೆಯುತ್ತಾನೆ ಎಂದು ಖಚಿತ  ಮೂಲಗಳು ವರದಿ ಮಾಡಿದೆ.

- Advertisement -

ಒಂದು ಸೀಟಿನ ಮೌಲ್ಯ 20 ಲಕ್ಷ ಮತ್ತು ಇದರಲ್ಲಿ ವಿದ್ಯಾರ್ಥಿ ಬದಲು ಪರೀಕ್ಷೆ ಬರೆಯುವ ವ್ಯಕ್ತಿಗೆ 5 ಲಕ್ಷ ನೀಡಲಾಗುತ್ತಿದೆ.  ಇನ್ನುಳಿದ ಹಣವನ್ನು ಮಧ್ಯವರ್ತಿ ಮತ್ತು ಇತರರು ಹಂಚಿಕೊಳ್ಳುತ್ತಾರೆ.  ಸಿಬಿಐ ಎಂಟು ಮಂದಿಯ ತಂಡವನ್ನು ಬಂಧಿಸಿದ್ದು ಈ ಪೈಕಿ ಆರು ಮಂದಿ ವಿದ್ಯಾರ್ಥಿಗಳ ಬದಲಿಗೆ ಪರೀಕ್ಷೆಗೆ ಹಾಜರಾಗುವವರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾಸ್ಟರ್ ಮೈಂಡ್ ಸಫ್ದರ್ಜಂಗ್ ನ ಸುಶೀಲ್ ರಂಜನ್ ಎಂಬಾತನನ್ನು ಬಂಧಿಸಿದ್ದು, ಪ್ರಕರಣದಲ್ಲಿ ಭಾಗಿಯಾದ ಇನ್ನುಳಿದ 11 ಮಂದಿಗಾಗಿ ಶೋಧ ನಡೆಸುತ್ತಿದ್ದಾರೆ.

ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಲು, ಸಿಬಿಐ ಈಗ ಅಭ್ಯರ್ಥಿಗಳೊಂದಿಗೆ ಮಾತನಾಡುತ್ತಿದೆ. ಇದರಲ್ಲಿ ಕೋಚಿಂಗ್ ಸಂಸ್ಥೆಗಳ ಪಾತ್ರವೂ ಪ್ರಶ್ನಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪರೀಕ್ಷೆಯಲ್ಲಿ ಚೀಟಿಂಗ್ ತಡೆಯುವುದಕ್ಕಾಗಿ ಅಧಿಕಾರಿಗಳು ನೀಟ್ ಪರೀಕ್ಷೆಯಲ್ಲಿನ ಭದ್ರತಾ ತಪಾಸಣೆಯನ್ನು ಬಿಗಿಗೊಳಿಸಿದ್ದಾರೆ. ಪರೀಕ್ಷಾ ಹಾಲ್ನಲ್ಲಿ ವ್ಯಾಲೆಟ್ಗಳು, ಗ್ಲೌಸ್, ಬೆಲ್ಟ್, ಕ್ಯಾಪ್, ಆಭರಣ, ಶೂ ಮತ್ತು ಹೀಲ್ಸ್ ನಿಷೇಧಿಸಲಾಗಿದೆ. ಅಭ್ಯರ್ಥಿಗಳು ಯಾವುದೇ ಲೇಖನ ಸಾಮಗ್ರಿಗಳನ್ನು ಕೊಂಡೊಯ್ಯಲು  ಅನುಮತಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.

ಆದರೆ ಈ ದಂಧೆ ನೀಟ್ ಐಡಿ ಕಾರ್ಡ್ ಗಳಲ್ಲಿರುವ ಫೋಟೊವನ್ನೇ ಬದಲಿಸಿ ಪರೀಕ್ಷೆ ಹಾಲ್ ಗೆ ವಿದ್ಯಾರ್ಥಿ ಬದಲು ಬೇರೊಬ್ಬರು ಪ್ರವೇಶಿಸುವಂತೆ ಮಾಡುತ್ತಿದ್ದು, ಆರೋಪಿಯು ಅಭ್ಯರ್ಥಿಯ ಯೂಸರ್ ಐಡಿ ಮತ್ತು ಪಾಸ್ವರ್ಡ್ ಪಡೆದು ತಾನು ಬಯಸುವ ಪರೀಕ್ಷಾ ಕೇಂದ್ರವನ್ನು ಪ್ರವೇಶಿಸಿ ಪರೀಕ್ಷೆಗೆ ಹಾಜರಾಗುತ್ತಾನೆ ಎಂದು ತಿಳಿದು ಬಂದಿದೆ.

Join Whatsapp