ತೈವಾನಿನ 2,000 ಬಗೆಯ ಆಹಾರ ಪದಾರ್ಥಗಳ ಆಮದನ್ನು ನಿಷೇಧಿಸಿದ ಚೀನಾ

Prasthutha|

ತೈಪೈ: ವಿವಾದಿತ ತೈವಾನ್ ದ್ವೀಪ ದೇಶಕ್ಕೆ ಅಮೆರಿಕ ಸಂಯುಕ್ತ ಸಂಸ್ಥಾನದ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ಭೇಟಿ ಖಂಡಿಸಿ ಚೀನಾವು ತೈವಾನಿನಿಂದ ಆಮದು ಮಾಡಿಕೊಳ್ಳುತ್ತಿದ್ದ 2,000 ಬಗೆಯ ಆಹಾರ ವಸ್ತುಗಳ ಆಮದು ನಿಷೇಧಿಸಿದೆ.

- Advertisement -

  ಬುಧವಾರ ಚೀನಾದ ಕಸ್ಟಮ್ಸ್ ಇಲಾಖೆಯವರು ತೈವಾನಿನ ಬಹಳಷ್ಟು ಆಹಾರ ವಸ್ತುಗಳನ್ನು ವಾಪಸು ಕಳುಹಿಸಿದ್ದಾರೆ. ಆಮದಾಗುವ ಕೆಲವು ಮೀನು, ಸಿಟ್ರುಸ್ ಹಣ್ಣು ಮೊದಲಾದವುಗಳಲ್ಲಿ ಮಿತಿ ಮೀರಿ ಕೀಟನಾಶಕ ಬಳಸುವುದನ್ನು ಹಿಂದೆ ಎಚ್ಚರಿಸಲಾಗಿತ್ತು. ಈಗ ರಿಟರ್ನ್ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

ಚೀನಾ ಹಿಂದೆಯೂ ತೈವಾನಿನ ತೋಟಗಾರಿಕಾ ಉತ್ಪನ್ನಗಳನ್ನು ತಿರಸ್ಕರಿಸಿದ್ದು ಇ. ಈ ಬಾರಿ ಪೆಲೋಸಿ ಭೇಟಿಯ ಕಾರಣದಿಂದಾಗಿ ಹೆಚ್ಚಿನ ಮಹತ್ವ ಬಂದಿದೆ.

- Advertisement -

ತೈವಾನಿನಿಂದ ಆಮದು ನಿಲ್ಲಿಸಿರುವುದರ ಹಿಂದೆ ರಾಜಕೀಯ ಕಾರಣ ಇದೆ ಎಂದು ಚೀನಾದ ತೈಚುಂಗ್ ನಗರ ನಿವಾಸಿಯಾದ ಜಾಯ್ಸ್ ಜಾನ್ ಎಂಬ ಕಾನೂನು ಪಾಲರು ತೈವಾನಿನ ಯುನೈಟೆಡ್ ಡೈಲಿ ನ್ಯೂಸ್ ಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಬಾರಿ ಚೀನಾವು 2,000 ಬಗೆಯ ತೈವಾನಿನ ಆಹಾರ ವಸ್ತುಗಳ ಆಮದು ನಿಲ್ಲಿಸಿದೆ ಎಂಬುದು ವಿಶೇಷವಾದುದು. ಇದರಲ್ಲಿ ತಾಜಾ ವಸ್ತುಗಳು, ಸಂಸ್ಕರಣೆ ಮಾಡಿದ ವಸ್ತುಗಳು, ಮಕ್ಕಳ ಆಹಾರ, ಕ್ಯಾಂಡಿ, ಪ್ಯಾಸ್ಟ್ರಿ ಇತ್ಯಾದಿ ಆಹಾರ, ಹಣ್ಣು, ತರಕಾರಿ ವಸ್ತುಗಳು ಸೇರಿವೆ ಎಂದು ಚೀನಾದ ಕಸ್ಟಮ್ಸ್ ಮಾಹಿತಿಯ ನಿಕ್ಕೈ ರೀವ್ಯೂ ವರದಿ ಮಾಡಿದೆ. ಆಮದು ನಿರಾಕರಣೆಗೆ ಯಾವುದೇ ಕಾರಣ ನೀಡಿಲ್ಲ ಎಂದೂ ನಿಕ್ಕೈ ಹೇಳಿದೆ.

ಸೋಮವಾರದಿಂದಲೇ ಆಮದು ನಿಷೇಧ ಆರಂಭಿಸಿದೆ ಎಂದು ಯುನೈಟೆಡ್ ಡೈಲಿ ನ್ಯೂಸ್ ವರದಿ ಮಾಡಿದೆ.

ತೈವಾನಿನ ಆಳುವ ಪಕ್ಷದ ಕಾನೂನು ಪಾಲ ವಾಂಗ್ ತಿಂಗ್ಯು ಅವರು ಚೀನಾದ ವ್ಯಾಪಾರವನ್ನು ಆಯುಧವಾಗಿಸುವ ತಂತ್ರಕ್ಕೆ ತೈವಾನ್ ಬೆದರುವುದಿಲ್ಲ ಎಂದು ಹೇಳಿದ್ದಾರೆ.

ತನಗೆ ಯಾವುದಾದರೂ ದೇಶದ ಮೇಲೆ ಅತೃಪ್ತಿ ಉಂಟಾದಾಗಲೆಲ್ಲ ವ್ಯಾಪಾರ ನಿರ್ಬಂಧ ಹೇರುವುದು ಚೀನಾದ ಹಳೆಯ ಜಾಯಮಾನವೇ ಆಗಿದೆ. ಕೋವಿಡ್ ಸೋಂಕು ಉಂಟಾದುದರ ಬಗ್ಗೆ ಆಸ್ಟ್ರೇಲಿಯಾದ ಕ್ಯಾನ್ಬೆರಾ ಹೇಳಿಕೆ ಚೀನಾದತ್ತ ಬೊಟ್ಟು ಮಾಡಿದ್ದರಿಂದ ಆಸ್ಟ್ರೇಲಿಯಾದಿಂದ ಕಲ್ಲಿದ್ದಲು, ಬಾರ್ಲಿ, ಕಡಲಾಹಾರ, ವೈನ್ ಇವುಗಳ ಆಮದನ್ನು ಚೀನಾ ನಿಲ್ಲಿಸಿದೆ.

ಚೀನಾವು ತೈವಾನಿನ ವಸ್ತುಗಳ ಆಮದು ನಿಷೇಧಿಸುವುದು ಹೊಸ ವಿಚಾರವೂ ಅಲ್ಲ. 2021ರಲ್ಲಿ ಎರಡು ದೇಶಗಳ ನಡುವೆ ಉದ್ವಿಗ್ನತೆ ಉಂಟಾದಾಗ ಚೀನಾವು ತೈವಾನಿನಿಂದ ಅನಾನಾಸು, ಸೀತಾಫಲದಂಥವನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿತ್ತು. ಈ ಬಾರಿ ಆಮದು ನಿಷೇಧವು ವಿಸ್ತೃತವಾಗಿದೆ ಎಂಬುದು ವಿಶೇಷ.

“ಹಿಂದೆ ಚೀನಾವು ಒಂದೇ ವಸ್ತು ಇಲ್ಲವೇ ಕೆಲವನ್ನು ಹಿಂದೆ ಕಳುಹಿಸುತ್ತಿತ್ತು ಮತ್ತು ಆಮದು ನಿಷೇಧಿಸುತ್ತಿತ್ತು. ಎಲ್ಲೆಲ್ಲಿ ಡೆಮಾಕ್ರೆಟಿಕ್ ಪ್ರೋಗ್ರೆಸಿವ್ ಪಕ್ಷವು ಪ್ರಬಲ ಇರುವುದೋ ಆ ಪ್ರದೇಶಕ್ಕೆ ಏಟು ಬೀಳುವಂತೆಯೂ ಆಮದು ನಿಷೇಧಿಸಿದ್ದಿದೆ. ಈ ಬಾರಿ ಹಾಗಿಲ್ಲ” ಎಂದು ತೈವಾನಿನ ಮುಖ್ಯ ಭೂಭಾಗ (ಚೀನಾ) ವ್ಯವಹಾರ ಮಂಡಳಿಯ ನೀತಿ ನಿರ್ವಹಣಾ ಸಮಿತಿಯ ಉಪಾಧ್ಯಕ್ಷರೂ ಆದ ಜನಪ್ರತಿನಿಧಿ ಚಿಯು ಚುಯಿ ಚೆಂಗ್ ಅವರು ಫೈನಾನ್ಸಿಯಲ್ ಟೈಮ್ಸ್ ಗೆ ಹೇಳಿದರು.

“ಈ ಬಾರಿ ಇಡೀ ದೇಶದ ಮೇಲೆ ಪರಿಣಾಮ ಬೀರುವಂತೆ ತುಂಬ ವಸ್ತುಗಳ ನಮ್ಮ ರಫ್ತಿಗೆ ತಡೆಯೊಡ್ಡಿದ್ದಾರೆ. ಇದು ಅವರಿಗೆ ಬಲಾತ್ಕಾರದಿಂದ ಕಿತ್ತುಕೊಳ್ಳುವ ಶಕ್ತಿಯನ್ನು ನೀಡಬಹುದು” ಎಂದೂ ಚಿಯು ಹೇಳಿದರು.

ತೈವಾನಿನ ಅತಿ ದೊಡ್ಡ ರಫ್ತು ಮಾರುಕಟ್ಟೆಯಾಗಿದೆ ಚೀನಾ. ತೈವಾನಿನ ಒಟ್ಟು ರಫ್ತಿನಲ್ಲಿ 42% ಚೀನಾಕ್ಕೆ ಹೋಗುತ್ತದೆ. ಯಂತ್ರಗಳ ಬಿಡಿ ಭಾಗಗಳು, ವಿದ್ಯುತ್ ಬಿಡಿ ಭಾಗಗಳೆಲ್ಲ ಇದರಲ್ಲಿ ಸೇರಿವೆ.

Join Whatsapp