ಚಿಕ್ಕಮಗಳೂರು: ಕಾಡು ಹಂದಿಗೆ ಇಟ್ಟ ಉರುಳಿಗೆ ಸಿಲುಕಿ ಚಿರತೆ ಸಾವು

Prasthutha|

ಮೂಡಿಗೆರೆ: ಕಾಡು ಹಂದಿ ಬೇಟೆಗಾಗಿ ಹಾಕಿದ್ದ ಉರುಳಿಗೆ ಸುಮಾರು ಮೂರು ವರ್ಷದ ಚಿರತೆ ಸಿಲುಕಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಬಿಳಗುಳ ಕೊಲ್ಲಿಬೈಲ್  ನಲ್ಲಿ ನಡೆದಿದೆ.

ಕಡೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ  ಸಮೀಪದ ಲಕ್ಷ್ಮಣಗೌಡ ಎಂಬವರ ಸುಮಾರು 10ವರ್ಷದಿಂದ ಪಾಳುಬಿದ್ದ ಕಾಫಿ ತೋಟದಲ್ಲಿ. ಅಪರಿಚಿತರು ಇಟ್ಟಿದ್ದ ಉರುಳಿಗೆ ಬಿದ್ದ ಚಿರತೆಯ ಕೂಗಾಟವನ್ನು ಕೇಳಿ ದಾರಿಹೋಕರು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

- Advertisement -

ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಚಿರತೆಯನ್ನು ಬದುಕಿಸಲು ಪ್ರಯತ್ನಪಟ್ಟರೂ ಉರುಳು ಕುತ್ತಿಗೆಗೆ ಬಲವಾಗಿ ಸಿಲುಕಿದ್ದ ಕಾರಣ  ಸಾಯುವ  ಹಂತಕ್ಕೆ ತಲುಪಿತ್ತು.

ಈ ಬಗ್ಗೆ ತೋಟದ ಮಾಲೀಕ ಮತ್ತು ಉರುಳು ಹಾಕಿದ ದುಷ್ಕರ್ಮಿಗಳ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದ್ದು, ಮೂಡಿಗೆರೆ ಅರಣ್ಯ ಇಲಾಖೆಗೆ ಶವ ಸ್ಥಳಾಂತರಿಸಿ ಮರಣೋತ್ತರ ಪರೀಕ್ಷೆಯ ನಂತರ ಚಿರತೆಯ ಶವವನ್ನು ಅಗ್ನಿಸ್ಪರ್ಷ ಮೂಲಕ ಸಂಸ್ಕಾರ ಮಾಡಲಾಗಿದೆ.

- Advertisement -