ಟರ್ಕಿಯಲ್ಲಿ ಕನ್ನಡಿಗರು ಸಿಲುಕಿದ್ರೆ ಮಾಹಿತಿ ನೀಡಿ: ಸಿಎಂ ಬೊಮ್ಮಾಯಿ

Prasthutha|

ಬೆಂಗಳೂರು: ಟರ್ಕಿಯಲ್ಲಿ ಕನ್ನಡಿಗರು ಸಿಲುಕಿದರೆ ಮಾಹಿತಿ ನೀಡಿ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

- Advertisement -


ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಿದೇಶಾಂಗ ಇಲಾಖೆ ವಿಶೇಷ ಹೆಲ್ಪ್ ಲೈನ್ ಪ್ರಾರಂಭಿಸುತ್ತಿದ್ದು, ಆ ಮೂಲಕ ಕನ್ನಡಿಗರ ಮಾಹಿತಿ ಪಡೆದುಕೊಳ್ಳಲಾಗುವುದು. ಜತೆಗೆ ಟರ್ಕಿ ರಾಯಭಾರ ಕಚೇರಿ ಜತೆಗೂ ನಮ್ಮ ಅಧಿಕಾರಿಗಳು ಸಂಪರ್ಕ ಪಡೆದು ಅಲ್ಲಿ ಕನ್ನಡಿಗರು ಯಾರೆಲ್ಲ ಇದ್ದಾರೆಂದು ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದರು.


ಬೆಂಗಳೂರಿನಲ್ಲಿ ಸರ್ಕಾರ ಈ ಸಂಬಂಧ ಹೆಲ್ಪ್ಲೈನ್ ಪ್ರಾರಂಭಿಸಲಿದ್ದು, ಜನರು ತಮ್ಮ ಬಂಧು-ಬಳಗದವರು ಯಾರಿದ್ದಾರೆ ಎಂಬ ಬಗ್ಗೆ ಮಾಹಿತಿ ಹಂಚಿಕೊಂಡರೆ ಅವರನ್ನೆಲ್ಲ ಸ್ವದೇಶಕ್ಕೆ ಕರೆತರಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

Join Whatsapp