ಚಿಕ್ಕಮಗಳೂರು: ಸಿದ್ದರಾಮಯ್ಯ ವಿರುದ್ಧ ಕಪ್ಪು ಬಾವುಟ ಪ್ರದರ್ಶನ

Prasthutha|

ಚಿಕ್ಕಮಗಳೂರು : ಜಿಲ್ಲಾ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ  ವಿರುದ್ಧ ಕಪ್ಪು ಬಾವುಟ ಪ್ರದರ್ಶನ ಮಾಡಿದ ಘಟನೆ ಕೊಪ್ಪ ತಾಲೂಕಿನ ಮಕ್ಕಿಕೊಪ್ಪ ಗ್ರಾಮದಲ್ಲಿ ನಡೆದಿದೆ.

- Advertisement -

ಸಾವರ್ಕರ್ ಬಗ್ಗೆ ಸಿದ್ದು ಹೇಳಿಕೆಗೆ  ಹಿಂದುತ್ವ ಸಂಘಟನೆಯ ಕಾರ್ಯಕರ್ತರು ಕಿಡಿ ಕಾರಿದ್ದು,ನಿನ್ನೆ ಗೋ ಬ್ಯಾಕ್ ಸಿದ್ದು ಅಭಿಯಾನ ಆರಂಭಿಸಿದ್ದರು.

ಹಿಂದೂ ವಿರೋಧಿ ಸಿದ್ದರಾಮಯ್ಯ  ಈ ಪುಣ್ಯ ಭೂಮಿಗೆ ಬರೋದು ಬೇಡ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

- Advertisement -

ಬಿಗಿ ಪೊಲೀಸ್ ಬಂದೋಬಸ್ತ್ ಮಧ್ಯೆಯೂ ಸಿದ್ದು ವಿರುದ್ಧ ಕಪ್ಪು ಬಾವುಟ ಪ್ರದರ್ಶನ ನಡೆದಿದೆ.

Join Whatsapp