ಮುಸ್ಲಿಮರನ್ನು ಬಹಿಷ್ಕರಿಸುವಂತೆ ಪ್ರತಿಜ್ಞೆಗೈದ ಸಂಘಪರಿವಾರ| ತನಿಖೆಗೆ ಆದೇಶ

Prasthutha|

ನವದೆಹಲಿ: ಮುಸ್ಲಿಮರನ್ನು ಆರ್ಥಿಕವಾಗಿ ಬಹಿಷ್ಕರಿಸುವಂತೆ ಸಂಘಪರಿವಾರದ ಕಾರ್ಯಕರ್ತರು ಗ್ರಾಮಸ್ಥರಿಂದ ಪ್ರತಿಜ್ಞೆ ಮಾಡಿಸಿದ ಘಟನೆಯ ಕುರಿತು ಛತ್ತೀಸ್ ಗಢ ಪೊಲೀಸರು ತನಿಖೆಗೆ ಆದೇಶಿಸಿದ್ದಾರೆ.

- Advertisement -

ಇತ್ತೀಚೆಗೆ ನಡೆದ ಬೆಳವಣಿಗೆಯೊಂದರಲ್ಲಿ ಸುರ್ಗುಜಾ ಜಿಲ್ಲೆಯ ಗ್ರಾಮಸ್ಥರು ಮುಸ್ಲಿಮ್ ವ್ಯಾಪಾರಿಗಳನ್ನು ಬಹಿಷ್ಕರಿಸುವ ಮತ್ತು ಮುಸ್ಲಿಮರೊಂದಿಗೆ ವ್ಯಾಪಾರ ವಹಿವಾಟು ಸ್ಥಗಿತಗೊಳಿಸುವ ಪ್ರತಿಜ್ಞೆ ಮಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.

“ಹಿಂದೂಗಳಾದ ನಮ್ಮ ಭೂಮಿಯನ್ನು ಮುಸ್ಲಿಮರಿಗೆ ಮಾರಾಟ ಮಾಡುವುದಿಲ್ಲ ಅಥವಾ ಗುತ್ತಿಗೆಗೆ ನೀಡುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತಿದ್ದೇವೆ” ಎಂದು ವ್ಯಕ್ತಿಯೊಬ್ಬರು ಬೋಧಿಸುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿತ್ತು.

- Advertisement -

ಇತ್ತೀಚೆಗೆ ಸುರ್ಗುಜಾದಲ್ಲಿ ರಾಜಕೀಯ ಲಾಭ ಪಡೆಯುವ ನಿಟ್ಟಿನಲ್ಲಿ ಗ್ರಾಮಸ್ಥರಿಂದ ಮುಸ್ಲಿಮ್ ವಿರೋಧಿ ಪ್ರತಿಜ್ಞೆ ಮಾಡುವಂತೆ ಪ್ರಚೋದಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶೀಘ್ರದಲ್ಲೇ ಬಂಧಿಸಲಾಗುವುದೆಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಶುಕ್ಲಾ ಮಾಧ್ಯಮಕ್ಕೆ ತಿಳಿಸಿದ್ದಾರೆ.

Join Whatsapp