ಕಬಡ್ಡಿ ಪಂದ್ಯಾಟದ ವೇಳೆ ಗಂಭೀರ ಗಾಯ| ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಆಟಗಾರ ಸಾವು

Prasthutha|

ರಾಯ್‌ಗಢ: ಕಬಡ್ಡಿ ಪಂದ್ಯಾಟದ ವೇಳೆ ತೀವ್ರವಾಗಿ ಗಾಯಗೊಂಡಿದ್ದ 32 ವರ್ಷದ ಆಟಗಾರನೊಬ್ಬ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೆ ಮೃತಪಟ್ಟ ಘಟನೆ ಛತ್ತೀಸ್‌ಗಢದ ರಾಯ್‌ಗಢ ಜಿಲ್ಲೆಯಲ್ಲಿ ನಡೆದಿದೆ.

- Advertisement -

ರಾಜ್ಯ ಸರ್ಕಾರದ ನೂತನ ಕ್ರೀಡಾ ಯೋಜನೆ ʻಛತ್ತೀಸ್‌ಗಢಿಯ ಒಲಿಂಪಿಕ್ಸ್‌ʼನ ಅಡಿಯಲ್ಲಿ ಘರ್ಘೋಡಾ ಪೊಲೀಸ್ ಠಾಣೆ ವ್ಯಾಪ್ತಿಯ ಭಾಲುಮಾರ್ ಪ್ರದೇಶದಲ್ಲಿ ನಡೆಯುತ್ತಿದ್ದ ಕಬಡ್ಡಿ ಪಂದ್ಯಕೂಟದಲ್ಲಿ ಈ ದುರಂತ ಸಂಭವಿಸಿದೆ

ತಂಡರಾಮ್ ಮಾಲಕರ್ ಎಂಬಾತನೇ ಮೃತ ದುರ್ದೈವಿ. ಎದುರಾಳಿ ತಂಡದ ಅಂಗಣದಲ್ಲಿ ರೈಡ್‌ ಮಾಡುತ್ತಿದ್ದಾಗ ಆಟಗಾರರು ಕ್ಯಾಚ್‌ ಮಾಡಿದ್ದಾರೆ. ಈ ವೇಳೆ ಮಾಲಕರ್‌ ಅವರ ತಲೆ  ಜೋರಾಗಿ ನೆಲಕ್ಕೆ ಬಡಿದ ಕಾರಣ ಪ್ರಜ್ಞಾಹೀನರಾಗಿದ್ದರು. ಟೂರ್ನಿ ಆಯೋಜಿಸಲಾಗಿದ್ದ ಸ್ಥಳದಲ್ಲಿ ಯಾವುದೇ ಪ್ರಾಥಮಿಕ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿರಲಿಲ್ಲ. ಮತ್ತೊಂದೆಡೆ ಕೆಟ್ಟ ರಸ್ತೆ ಮತ್ತು ಟ್ರಾಫಿಕ್‌ ಕಾರಣದಿಂದಾಗಿ 4 ಕಿಲೋ ದೂರದಲ್ಲಿದ್ದ ಆಸ್ಪತ್ರೆಯನ್ನು ತಲುಪಲು ಬರೋಬ್ಬರಿ 4 ಗಂಟೆ ಸಮಯ ತೆಗೆದುಕೊಳ್ಳಲಾಗಿದೆ. ಹೀಗಾಗಿ ಗಂಭೀರ ಗಾಯಗೊಂಡಿದ್ದ ತಂಡರಾಮ್‌, ರಾಯ್‌ಗಢ್ ಜಿಲ್ಲಾಸ್ಪತ್ರೆ ತಲುಪುವ ವೇಳೆ ಮೃತಪಟ್ಟಿದ್ದಾರೆ ಎಂದು  ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

- Advertisement -

ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮೃತರ ಕುಟುಂಬಕ್ಕೆ 4 ಲಕ್ಷ ರೂಪಾಯಿ ಆರ್ಥಿಕ ನೆರವು ಘೋಷಿಸಿದ್ದಾರೆ. ಆದರೆ ಮೃತ ಆಟಗಾರನ  ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಬೇಕು ಮತ್ತು ಸ್ಥಳದಲ್ಲಿ ಯಾವುದೇ  ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿದ ಸಂಘಟಕರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ. 

Join Whatsapp