ನಾಲ್ಕಕ್ಕಿಂತ ಹೆಚ್ಚು ಮಕ್ಕಳಿದ್ದರೆ ಮಣಿಪುರದಲ್ಲಿ ಯಾವುದೇ ಸರ್ಕಾರಿ ಸೌಲಭ್ಯ ಇಲ್ಲ!

Prasthutha|

ಮಣಿಪುರ: ಒಂದು ಕುಟಂಬ ನಾಲ್ಕಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ ಆ ಕುಟುಂಬದ ಯಾವುದೇ ಸದಸ್ಯರಿಗ ಸರ್ಕಾರಿ ಸೌಲಭ್ಯ ಹಾಗೂ ಪ್ರಯೋಜನಗಳು ಲಭ್ಯವಿಲ್ಲ ಎಂದು ಮಣಿಪುರ ಸರ್ಕಾರ ಘೋಷಿಸಿದೆ.

- Advertisement -

ಮಣಿಪುರದಲ್ಲಿ ಜನಸಂಖ್ಯಾ ನಿಯಂತ್ರಣ ಕಾಯ್ದಿಗೆ ಸುಗ್ರಿವಾಜ್ಞೆ ಮೂಲಕ ಅನುಮೋದನೆ ನೀಡಲಾಗಿದೆ. ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ನೇತೃತ್ವದ ರಾಜ್ಯ ಕ್ಯಾಬಿನೆಟ್ ಈ ಕಾಯ್ದೆಗೆ ಅನುಮೋದನೆ ನೀಡಿದೆ.ಮಣಿಪುರ ರಾಜ್ಯ ಜನಸಂಖ್ಯಾ ಆಯೋಗದ ಅಡಿಯಲ್ಲಿ ಈ ನೀತಿ ಜಾರಿಗೆ ಬಂದ ಬಳಿಕ ಯಾವುದೇ ದಂಪತಿ ನಾಲ್ಕು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ, ಆ ಕುಟುಂಬದ ಯಾವುದೇ ಸದಸ್ಯರಿಗೆ ಸರ್ಕಾರಿ ಸೌಲಭ್ಯಗಳು ಇರುವುದಿಲ್ಲ.

2001ರ ಜನಗಣತಿಯಲ್ಲಿ ಅಸ್ಸಾಂ ಜನಸಂಖ್ಯೆ 22.93 ಲಕ್ಷ ಆಗಿತ್ತು. 2011ರ ಜನಗಣತಿಯಲ್ಲಿ ಈ ಸಂಖ್ಯೆ 28.56 ಲಕ್ಷಕ್ಕೆ ಏರಿಕೆಯಾಗಿದೆ. ಇನ್ನು ಜನಸಂಖ್ಯಾ ಅಸಮತೋಲನವನ್ನು ಹೋಗಲಾಡಿಸಲು ಹಾಗೂ ಭವಿಷ್ಯದಲ್ಲಿ ಎದುರಾಗುವ ಅಪಾಯ ತಪ್ಪಿಸಲು ಜನಸಂಖ್ಯಾ ನಿಯಂತ್ರಣ ಕಾನೂನು ಅತ್ಯವಶ್ಯಕ ಎಂದು ಮಣಿಪುರ ಸರ್ಕಾರ ಹೇಳಿದೆ.

Join Whatsapp