ಸತ್ಯದ ಪರ ಧ್ವನಿಯಾದ ಪ್ರಸ್ತುತವನ್ನು ಉಳಿಸಿಕೊಳ್ಳಲು ನೆರವಾಗಿ

Prasthutha|


ಮಾಧ್ಯಮದ ಮಹತ್ವವನ್ನು ಅರಿಯದವರು ಇಂದು ವಿರಳ. ಒಂದು ರಾಷ್ಟ್ರದ ಅಳಿವು ಉಳಿವಿನಲ್ಲಿ ಮಾಧ್ಯಮದ ಪಾತ್ರ ನಿರ್ಣಾಯಕವಾಗಿದೆ. ಇಂದು ಕೋಮುವಾದಿಗಳು ತಮ್ಮ ಸ್ವಾರ್ಥ ಹಿತಾಸಕ್ತಿಗಾಗಿ ಹೆಚ್ಚಿನ ಮಾಧ್ಯಮಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ಮೂಲಕ ಅವರು ಸತ್ಯವನ್ನು ಮರೆಮಾಚಿ ಸುಳ್ಳನ್ನು ಸತ್ಯವೆಂದು ಬಹಳ ಸುಲಭವಾಗಿ ಬಿಂಬಿಸುತ್ತಾರೆ. ಇದರಿಂದಾಗಿ ಜನರಿಗೆ ನ್ಯಾಯ ಮರೀಚಿಕೆಯಾಗಿದೆ. ಅನ್ಯಾಯ ವಿಜೃಂಭಿಸುತ್ತಿದೆ. ಶೋಷಣೆ ನಿರಂತರವಾಗಿದೆ. ಯಾವುದೇ ಸಣ್ಣ ಘಟನೆಯನ್ನು ಕೋಮು ಗಲಭೆಯಾಗಿ ಪರಿವರ್ತಿಸಿ ನಿರ್ದಿಷ್ಟ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಅವರಿಗೆ ಸಾಧ್ಯವಾಗಿದೆ. ಪರಸ್ಪರ ಒಡಕು ಸೃಷ್ಟಿಸಿ ಸಮಾಜವನ್ನು ಒಡೆಯಲಾಗುತ್ತಿದೆ. ಇದರಿಂದಾಗಿ ನಡೆದ ಘಟನೆಯ ಸತ್ಯಾಸತ್ಯವನ್ನು ತಿಳಿಯಲಾಗದ ಪರಿಸ್ಥಿತಿ ಎಲ್ಲೆಡೆ ಇದೆ.
ಇದಕ್ಕೆ ಪರಿಹಾರ ಎಂಬಂತೆ ಸತ್ಯವನ್ನು ಬಹಿರಂಗಗೊಳಿಸುವ ಉದ್ದೇಶದಿಂದ ಪ್ರಸ್ತುತ ಚಾನೆಲನ್ನು ನಾವು ಪ್ರಾರಂಭಿಸಿದೆವು. ಆ ಮೂಲಕ ವಾಸ್ತವವನ್ನು ಕಣ್ಣಿಗೆ ರಾಚುವಂತೆ ತೋರಿಸಿದೆವು. ಮನ ಮುಟ್ಟುವಂತೆ ವಿವರಿಸಿದೆವು. ಮಾಧ್ಯಮಗಳ ಕಾಪಟ್ಯವನ್ನು ಬಯಲಿಗೆಳೆದೆವು
. ಸಹಜವಾಗಿ ಎಲ್ಲಾ ರೀತಿಯ ಬೆದರಿಕೆ, ಕಿರುಕುಳದ ಅನುಭವ ನಮಗೂ ಆಯಿತು. ಜೊತೆಗೆ ಆರ್ಥಿಕ ಸಂಕಷ್ಟ ನಮ್ಮನ್ನು ಮತ್ತಷ್ಟು ಬಳಲಿಸಿತು. ಸಮಾಜ ಸೇವಾ ಮನೋಭಾವ ಹೊಂದಿದ ನಮ್ಮ ಪ್ರಾಮಾಣಿಕ ಸಿಬ್ಬಂದಿ ವರ್ಗದ ವೇತನಕ್ಕೂ ಪರದಾಡುವ ಪರಿಸ್ಥಿತಿ ಇಂದು ನಮ್ಮ ಮುಂದಿದೆ.
ಸತ್ಯವನ್ನು ಇಷ್ಟಪಡುವ ನಿಮ್ಮಂತಹಾ ದಾನಿಗಳ ನೆರವಿನಿಂದ ಈ ಚಾನೆಲ್ ಇದುವರೆಗೂ ಮುಂದೆ ಸಾಗಿದೆ. ನಿಮ್ಮೆಲ್ಲರ ಆರ್ಥಿಕ ನೆರವಿನ ಹೊರತು ಇದನ್ನು ಮುನ್ನಡೆಸಲಾಗದು. ಸತ್ಯದ ಈ ಧ್ವನಿಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಒಮ್ಮೆ ಇದು ನಿಂತು ಹೋದರೆ ಮರಳಿ ಪ್ರಾರಂಭಿಸುವುದು ಸುಲಭವಲ್ಲ.
ಆದುದರಿಂದ ಸತ್ಯದ ಈ ಧ್ವನಿಯನ್ನು ಉಳಿಸಿಕೊಳ್ಳಲು ನೀವು ನಿಮ್ಮ ವರಮಾನದ ಒಂದಂಶವನ್ನು ನಿರಂತರವಾಗಿ ಮೀಸಲಿಟ್ಟು ನೆರವಾಗಲೇ ಬೇಕು. ಇದು ಸಾಮಾಜಿಕ ಜವಾಬ್ದಾರಿಯೂ ಆಗಿದೆ ಎಂಬುದನ್ನು ಮರೆಯದಿರಿ. ಈ ಮೊದಲೂ ನೀವು ನೆರವಾಗಿದ್ದೀರಿ. ಇನ್ನೂ ನೆರವಾಗುವಿರೆಂಬ ಆಶಾಭಾವನೆಯೊಂದಿಗೆ ಈ ಪತ್ರ ಬರೆಯುತ್ತಿದ್ದೇವೆ.

Join Whatsapp