ಅಮರಾವತಿಯನ್ನು ಆಂಧ್ರಪ್ರದೇಶದ ರಾಜಧಾನಿ ಎಂದು ಘೋಷಿಸಿದ ಚಂದ್ರಬಾಬು ನಾಯ್ಡು

Prasthutha|

ವಿಜಯವಾಡ: ಟಿಡಿಪಿ ಮುಖ್ಯಸ್ಥ, ನಿಯೋಜಿತ ಸಿಎಂ ನಾರಾ ಚಂದ್ರಬಾಬು ನಾಯ್ಡು ಅವರು ಮಂಗಳವಾರ ವಿಜಯವಾಡದಲ್ಲಿ ನಡೆದ ಎನ್ ಡಿಎ ಸಭೆಯಲ್ಲಿ ಅಮರಾವತಿ ಆಂಧ್ರಪ್ರದೇಶದ ರಾಜಧಾನಿ ಎಂದು ಘೋಷಿಸಿದ್ದಾರೆ.

- Advertisement -


ಟಿಡಿಪಿ-ಜೆಎಸ್ಪಿ-ಬಿಜೆಪಿ ಶಾಸಕರು ಎ-ಕನ್ವೆನ್ಷನ್ ಸೆಂಟರ್ ನಲ್ಲಿ ಸಭೆ ನಡೆಸಿ ಚಂದ್ರಬಾಬು ನಾಯ್ಡು ಅವರನ್ನು ಸಿಎಂ ಅಭ್ಯರ್ಥಿಯಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಆಯ್ಕೆಯಾದ ನಂತರ ಕನ್ವೆನ್ಷನ್ ಸೆಂಟರ್ನಲ್ಲಿ ಮಾತನಾಡಿದ ನಾಯ್ಡು, ಜನರು ನೀಡಿದ ತೀರ್ಪನ್ನು ಎತ್ತಿ ಹಿಡಿಯುವ ಜವಾಬ್ದಾರಿ ನಮ್ಮ ಮೇಲಿದೆ. 3 ಪಕ್ಷಗಳ ಮುಖಂಡರು, ಕಾರ್ಯಕರ್ತರು ನೂರಕ್ಕೆ ನೂರು ಪ್ರತಿಶತ ಒಗ್ಗಟ್ಟಾಗಿ ಕೆಲಸ ಮಾಡಿದರು.

ಚುನಾವಣೆಯಲ್ಲಿ ಶೇ.93ರಷ್ಟು ಸ್ಥಾನಗಳನ್ನು ಗೆಲ್ಲುವುದು ದೇಶದ ಇತಿಹಾಸದಲ್ಲೇ ಅಪರೂಪ. ಚುನಾವಣೆಯಲ್ಲಿ ಜನರು 57 ರಷ್ಟು ಮತಗಳನ್ನು ಪಡೆದು ಆಶೀರ್ವದಿಸಿದ್ದಾರೆ. ನಾವೆಲ್ಲರೂ ಹೆಚ್ಚು ಜವಾಬ್ದಾರಿಯುತರಾಗಬೇಕು ಎಂದು ಹೇಳಿದ್ದಾರೆ.

Join Whatsapp