ಮಡಿಕೇರಿ: ಜ.20 ರಂದು “ಚಂಪಾ” ಒಂದು ನೆನಪು ಉಪನ್ಯಾಸ ಕಾರ್ಯಕ್ರಮ

Prasthutha|

ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಸಂಯುಕ್ತ ಆಶ್ರಯದಲ್ಲಿ ಜ.20 ರಂದು “ಚಂಪಾ” ಒಂದು ನೆನಪು ಉಪನ್ಯಾಸ ಹಾಗೂ ಸಾಹಿತಿ ಬಿ.ಆರ್.ಜೋಯಪ್ಪ ರವರ ಕೃತಿ “ಬದುಕು” ಪರಿಸರ ಕಥನ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

- Advertisement -

ಜನವರಿ 20 ರಂದು ಮಧ್ಯಾಹ್ನ 2.30ಕ್ಕೆ ನಗರದ ಕೊಡಗು ಪತ್ರಿಕಾ ಭವನದ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಕಸಾಪ, ಹಾಗೂ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕೊಡಗು ಜಿಲ್ಲಾ‌ ಕಸಾಪದ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಉದ್ಘಾಟಿಸಲಿದ್ದಾರೆ.

ಗದಗದ ಕೆ.ವಿ.ಎಸ್.ಆರ್. ಕಾಲೇಜಿನ ಪ್ರಾಚಾರ್ಯರು, ಸಾಹಿತಿ ಮತ್ತು ಚಿಂತಕರೂ ಆದ ಪ್ರೊ.ಸಿದ್ದು ಯಾಪಲಪರವಿಯವರು ಪ್ರೋ ಚಂಪಾ ಅವರ ಕುರಿತು ಉಪನ್ಯಾಸ ನೀಡಲಿದ್ದಾರೆ.

- Advertisement -

ಸಾಹಿತಿ ಶ್ರೀ ಬಿ.ಆರ್.ಜೋಯಪ್ಪ ರವರ ರಚಿಸಿದ “ಬದುಕು” ಪರಿಸರ ಕಥನ ಪುಸ್ತಕವನ್ನು ಮಡಿಕೇರಿಯ ಫೀ.ಮಾ.ಕಾರ್ಯಪ್ಪ ಕಾಲೇಜಿನ ಹಿಂದಿ ಭಾಷಾ ವಿಭಾಗದ ಪ್ರಾಧ್ಯಾಪಕರಾದ ಡಾ. ಶ್ರೀಧರ ಹೆಗಡೆ ಬಿಡುಗಡೆಗೊಳಿಸಿ ಮಾತನಾಡಲಿದ್ದಾರೆ.  ಸಾಹಿತಿ ಬಿ.ಆರ್. ಜೋಯಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ಕೊಡಗಿನ ಯುವ ಗಾಯಕರಿಂದ ಕನ್ನಡ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ.



Join Whatsapp