ಕೊರೋನಾ ಒಂದು ಮೆಡಿಕಲ್ ಮಾಫಿಯ, ಇತರ ರೋಗಿಗಳ ಸಾವಿಗೆ ಕೊರೋನಾ ಸಾವು ಎನ್ನಲಾಗುತ್ತಿದೆ: ಡಾ. ಟಿ.ಹೆಚ್. ಆಂಜನಪ್ಪ

Prasthutha|

ದೊಡ್ಡಬಳ್ಳಾಪುರ: ಕೊರೊನಾ, ಡೆಲ್ಟಾ, ಓಮಿಕ್ರಾನ್ ಎಲ್ಲವೂ ಒಂದು ಮೆಡಿಕಲ್ ಮಾಫಿಯವಾಗಿದೆ ಎಂದು ಖ್ಯಾತ ವೈದ್ಯ ಡಾ. ಟಿ. ಹೆಚ್. ಆಂಜನಪ್ಪ ಹೇಳಿದ್ದಾರೆ. ಇದೊಂದು ಗೊಣ್ಣೆ ಸುರಿಸುವ ವೈರಸ್ ಅಷ್ಟೇ ಆಗಿದ್ದು, ದೇಶಗಳ ಆರ್ಥಿಕತೆ ಮುಳುಗಿತ್ತಿರುವ ಕಾರಣಕ್ಕಾಗಿ ಕೊರೊನಾ ವೈರಸ್ ಗುಮ್ಮವನ್ನು ಬಣ್ಣ ಬಣ್ಣದಲ್ಲಿ ಹರಿಯ ಬಿಡಲಾಗಿದೆ ಎಂದು ಕೂಡ ಅವರು ಹೇಳಿದ್ದಾರೆ.

- Advertisement -

ಕೊವಿಡ್ ಖಂಡಿತಾ ಮರಣ ಮೃದಂಗ ಬಾರಿಸುವ ವೈರಸ್ ಅಲ್ಲ, ಕೊರೋನಾ ಎರಡನೇ ಅಲೆ ಎನ್ನಲಾಗುವ ಸಂದರ್ಭದಲ್ಲಿ ಸೃಷ್ಟಿಸಲಾದ ಭಯ ಮತ್ತು ಆಕ್ಸಿಜನ್, ಬೆಡ್ ಸಿಗದೇ ಜನರ ಸಾವು ಸಂಭವಿಸಿದೆ. ಜನರ ಸಾವಿಗೆ ವೈರಸ್ ಒಂದು ನೆಪ ಅಷ್ಟೆ ಎಂದು ಅವರು ಹೇಳಿದ್ದಾರೆ.

ಒಂದು ವರ್ಷದಲ್ಲಿ 4.5 ಲಕ್ಷ ಜನ ಟಿಬಿ ಕಾಯಿಲೆಯಿಂದ ಸಾವಿಗೀಡಾಗುತ್ತಿದ್ದಾರೆ. ಇತರ ರೋಗಗಳಿಂದಲೂ ಲಕ್ಷಾಂತರ ಮಂದಿ ಸಾಯುತ್ತಾರೆ. ಅವುಗಳಿಗೆ ಹೋಲಿಸಿದರೆ ಕೋವಿಡ್-19 ವೈರಸ್ ನಿಂದ ಸಾಯೋರು ಕಡಿಮೆ. ಆದರೆ ಇತರ ರೋಗಿಗಳಲ್ಲಿ ಕೋವಿಡ್ ಪತ್ತೆಹಚ್ಚಿ ಅವರ ಸಾವನ್ನು ಕೋವಿಡ್ ಸಾವೆಂದು ಲೆಕ್ಕ ಹೇಳಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ. ಜನರ ಬದುಕನ್ನು ಬೀದಿಗೆ ತಂದು ಸಮಾಜವನ್ನು ಅಸ್ತವ್ಯಸ್ತ ಮಾಡಲಾಗಿದೆ. ಕೊರೊನಾ ಎನ್ನುವುದು ಒಂದು ಮೆಡಿಕಲ್ ಮಾಫಿಯಾ ಅಷ್ಟೆ ಎಂದು ಡಾ. ಟಿ. ಹೆಚ್. ಆಂಜನಪ್ಪ ಅಭಿಪ್ರಾಯಪಟ್ಟಿದ್ದಾರೆ.

Join Whatsapp