ಉತ್ತರ ಪ್ರದೇಶ: ದೇವ್ ಬಂದ್ ಇಸ್ಲಾಮಿಕ್‌ ಶಿಕ್ಷಣ ಸಂಸ್ಥೆಯ ವೆಬ್‌ಸೈಟ್‌ ಬ್ಲಾಕ್‌ಗೆ ಸೂಚನೆ!

Prasthutha|

ಲಕ್ನೋ : ದೇಶದ ಅತ್ಯುನ್ನತ ಇಸ್ಲಾಮಿಕ್ ಶಿಕ್ಷಣ ಸಂಸ್ಥೆ ದಾರುಲ್‌ ಉಲೂಮ್‌ ದೇವ್‌ಬಂದ್‌ ಸಂಸ್ಥೆಯ ವೆಬ್‌ಸೈಟ್‌ ವಿರುದ್ಧ ತನಿಖೆಗೆ ಆದೇಶಿಸುವಂತೆ ಹಾಗೂ ವೆಬ್‌ಸೈಟ್‌ ಬ್ಲಾಕ್‌ ಮಾಡುವಂತೆ ರಾಷ್ಟ್ರೀಯ ಮಕ್ಕಳ ಹಕ್ಕು ಸಂರಕ್ಷಣಾ ಆಯೋಗ ( NCPCR) ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.

- Advertisement -

ವೆಬ್‌ಸೈಟ್‌ನಲ್ಲಿ ಜನರು ಕೇಳಿರುವ ಪ್ರಶ್ನೆಗಳಿಗೆ ದಾರುಲ್‌ ಉಲೂಮ್‌ ನೀಡಿದ ಉತ್ತರಗಳು ಹಾಗೂ ವಿವರಣೆಗಳು ದೇಶದ ಕಾನೂನು ಹಾಗೂ ಕಾಯ್ದೆಗಳ ವಿರುದ್ಧವಾಗಿವೆ ಹಾಗೂ ಮಕ್ಕಳ ಹಕ್ಕುಗಳಿಗೆ ಸಹ ವಿರುದ್ಧವಾಗಿವೆ ಎಂದು ಎನ್‌ಸಿಪಿಸಿಆರ್‌ ಹೇಳಿದೆ. ಹೀಗಾಗಿ ಕಾನೂನುಬದ್ಧವಲ್ಲದ ಆಕ್ಷೇಪಾರ್ಹ ಪ್ರಕಟಿಸಿರುವ ಈ ವೆಬ್‌ಸೈಟ್‌ ವಿರುದ್ಧ ಕ್ರಮ ಕೈಗೊಂಡ ವರದಿಯನ್ನು 10 ದಿನದಲ್ಲಿ ಸಲ್ಲಿಸಬೇಕು ಎಂದು ಅದು ಹೇಳಿದೆ.

ದತ್ತು ಪಡೆದ ಮಗುವಿಗೆ ಆಸ್ತಿಯಲ್ಲಿ ಪಾಲಿಲ್ಲ:

- Advertisement -

“ಫತ್ವಾಗಳಲ್ಲೊಂದರಲ್ಲಿ (969/969/M=09/1436, ದಾರುಲ್ ಉಲೂಮ್ ದೇವ್ ಬಂದ್ ಮಗುವನ್ನು ದತ್ತು ಪಡೆಯುವುದು ಕಾನೂನುಬಾಹಿರವಲ್ಲ ಆದರೆ ಕೇವಲ ಮಗುವನ್ನು ದತ್ತು ತೆಗೆದುಕೊಳ್ಳುವ ಮೂಲಕ, ನಿಜವಾದ ಮಗುವಿನ ತೀರ್ಪು ಅವನ ಮೇಲೆ ಅನ್ವಯಿಸುವುದಿಲ್ಲ. ಪ್ರಬುದ್ಧನಾದ ನಂತರ ಅವನಿಂದ ಶರಿಯಾ ಪರ್ದಾವನ್ನು ಆಚರಿಸುವುದು ಅವಶ್ಯಕ. ದತ್ತು ಪಡೆದ ಮಗು ಆಸ್ತಿಯಲ್ಲಿ ಯಾವುದೇ ಪಾಲು ಪಡೆಯುವುದಿಲ್ಲ ಮತ್ತು ಯಾವುದೇ ಸಂದರ್ಭದಲ್ಲಿ ಮಗು ಉತ್ತರಾಧಿಕಾರಿಯಾಗುವುದಿಲ್ಲ, ” ಎಂದು ಎನ್‌ಸಿಪಿಸಿಆರ್ ಪತ್ರದಲ್ಲಿ ಉದಾಹರಣೆಯಾಗಿ ಉಲ್ಲೇಖಿಸಿದೆ.

Join Whatsapp