ಬೆಂಗಳೂರು: ದೆಹಲಿಯ ಜಹಾಂಗೀರ್ ಪುರಿಯಲ್ಲಿ ಮುಸಲ್ಮಾನರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ ನಡೆಸಿ ಧ್ವಂಸಗೈದ ಘಟನೆಯನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಬೆಂಗಳೂರು ಜಿಲ್ಲಾ ಸಮಿತಿಯು ಫ್ರೀಡಂ ಪಾರ್ಕ್ ಬಳಿ ಪ್ರತಿಭಟನೆ ನಡೆಯಿತು. ಆದರೆ ಸ್ಥಳಕ್ಕಾಗಮಿಸಿದ ಪೋಲಿಸರು ವಿದ್ಯಾರ್ಥಿಗಳನ್ನು ಬಂಧಿಸಿ ಠಾಣೆಗೆ ಕರೆದೊಯ್ದು ನಂತರ ಬಿಡುಗೆಡಗೊಳಿಸಿದರು.
ಮುಸಲ್ಮಾನರನ್ನು ಗುರಿಯಾಗಿಸಿಕೊಂಡು ದೇಶದಲ್ಲಿ ಸಂಘಪರಿವಾರವು ದಿನನಿತ್ಯ ಗಲಭೆಗಳನ್ನು ನಡೆಸುತ್ತಿದ್ದು ನಂತರ ಅದನ್ನು ಮುಸಲ್ಮಾನರ ತಲೆಗೆ ಕಟ್ಟಿ ಮುಸಲ್ಮಾನರನ್ನೇ ಅಪರಾಧಿಗಳೆಂಬಂತೆ ಬಿಂಬಿಸಲಾಗುತ್ತಿದೆ, ಇದೇ ಘಟನೆಯಾಗಿದೆ ಜಹಾಂಗೀರ್ ಪುರಿಯಲ್ಲಿ ನಡೆದಿದ್ದು ಮುಸಲ್ಮಾನರ ಮೇಲೆ ನಕಲಿ ಆರೋಪ ಹೊರಿಸಿ ಇದೀಗ ಮಾನವ ಹಕ್ಕುಗಳ ಉಲ್ಲಂಘನೆಯಾಗುವಂತಹ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ ನಡೆಸಿ ಧ್ವಂಸಗೈಯುವಂತಹ ನೀಚ ಪ್ರವೃತ್ತಿ ಮೋದಿ ಸರ್ಕಾರ ಮಾಡುತ್ತಿದ್ದು ಇದನ್ನು ಜಾತ್ಯಾತೀತ ಮನೋಸ್ಥಿತಿಯ ಜನತೆ ಕಟುವಾಗಿ ಖಂಡಿಸಬೇಕಾಗಿದೆ ಎಂದು ಕ್ಯಾಂಪಸ್ ಫ್ರಂಟ್ ಬೆಂಗಳೂರು ಜಿಲ್ಲಾಧ್ಯಕ್ಷ ಆಕಿಬ್ ಬೆಂಗಳೂರು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯ ಗೌಸ್ ಹೊಸಪೇಟೆ, ಜಿಲ್ಲಾ ಮುಖಂಡರಾದ ಅಫ್ರೀದ್, ಮುಹೀನ್ ಮತ್ತಿತರರು ಉಪಸ್ಥಿತರಿದ್ದರು.