ಸಿಇಟಿ ಫಲಿತಾಂಶ ಪ್ರಕಟ: ಅಪೂರ್ವ್ ಟಂಡನ್ ಗೆಇಂಜಿನಿಯರಿಂಗ್ ಪರೀಕ್ಷೆಯಲ್ಲಿ ಅಗ್ರಸ್ಥಾನ

Prasthutha|

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಇಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) 2022 ರ ಫಲಿತಾಂಶವನ್ನು ಪ್ರಕಟ ಮಾಡಿದೆ.

- Advertisement -

ಬೆಂಗಳೂರಿನ ಅಪೂರ್ವ ಟಂಡನ್ ಇಂಜಿನಿಯರಿಂಗ್ ವಿಭಾಗದ ಪರೀಕ್ಷೆಯಲ್ಲಿ 98.61% ನೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ. 98.33% ಅಂಕಗಳನ್ನು ಗಳಿಸಿದ ಬೆಂಗಳೂರಿನ ಸಿದ್ಧಾರ್ಥ ಸಿಂಗ್ ಎರಡನೇ ರ್‍ಯಾಂಕ್ ಹಂಚಿಕೊಂಡರೆ, 98.11% ಅಂಕ ಗಳಿಸಿದ ಆತ್ಮಕುರಿ ವೆಂಕಟ ಮಾಧ್ ನಂತರದ ಸ್ಥಾನದಲ್ಲಿದ್ದಾರೆ.

ಜೂನ್ 16, 17 ರಂದು 486 ಕೇಂದ್ರಗಳಲ್ಲಿ ನಡೆದ ಸಿಇ ಟಿ ಪರೀಕ್ಷೆಗೆ, ಒಟ್ಟು 2,16,559 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಈ ಪೈಕಿ 2,10,829 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 1,71,656 ವಿದ್ಯಾರ್ಥಿಗಳು ಇಂಜಿನಿಯರಿಂಗ್, 1,74,568 ವಿದ್ಯಾರ್ಥಿಗಳು ಬಿ ಫಾರ್ಮಾ ಮತ್ತು 1,39,968 ವಿದ್ಯಾರ್ಥಿಗಳು ಬಿಎಸ್ಸಿ (ಕೃಷಿ) ಗೆ ಅರ್ಹರಾಗಿದ್ದಾರೆ.

Join Whatsapp