ಕೊಲೆ ಪ್ರಕರಣದ ಪಿತೂರಿಗಾರರ ವಿರುದ್ಧ ಕ್ರಮ ಅನಿವಾರ್ಯ: ರಾಮಲಿಂಗಾ ರೆಡ್ಡಿ

Prasthutha|

ಬೆಂಗಳೂರು: ಕೇವಲ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿದರೆ ಸಾಲದು, ಬದಲಾಗಿ ಅವರ ಹಿಂದಿನ ಪಿತೂರಿಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಾಗಾದರೆ ಪ್ರಕರಣಗಳು ಕಡಿಮೆಯಾಗಬಹುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

- Advertisement -


ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ನಾನು ಗೃಹ ಸಚಿವನಾಗಿದ್ದಾಗ ವರದಿ ತರಿಸಿಕೊಂಡಿದ್ದೆ. ಆ ವರದಿಯಲ್ಲಿ ನಾಲ್ಕೈದು ಜನರು ರಾಜಕೀಯ ಕಾರಣಕ್ಕೆ ಹತ್ಯೆಯಾದರೆ ಉಳಿದ ಹತ್ಯೆಗಳು ಹಳೇ ದ್ವೇಷ, ಆಸ್ತಿ ಜಗಳ, ಅಪಘಾತದಿಂದ ಸತ್ತಿದ್ದರು. ಆ ಬಗ್ಗೆ ಬಿಡುಗಡೆ ಮಾಡಿದ್ದ‘ನಗ್ನ ಸತ್ಯ’ ಎಂಬ ಪುಸ್ತಕದ ಸತ್ತವರ ಪಟ್ಟಿಯಲ್ಲಿ ಆರ್‌ಎಸ್‌ಎಸ್‌, ವಿಶ್ವ ಹಿಂದೂ ಪರಿಷತ್ ಹಾಗೂ ಬಿಜೆಪಿ ಕಾರ್ಯಕರ್ತರಷ್ಟೇ ಅಲ್ಲ, ಎಸ್‌ಡಿಪಿಐ, ಪಿಫ್‌ಐ ಸದಸ್ಯರೂ ಇದ್ದರು. ಮೊದಲು ಕೊಲೆ ಮಾಡಿದವರ ವಿರುದ್ಧ ಮಾತ್ರ ದೋಷಾರೋಪ ಸಲ್ಲಿಸಲಾಗುತ್ತಿತ್ತು. ಪಿತೂರಿ ಮಾಡಿದವರ ಹೆಸರು ಸೇರುತ್ತಿರಲಿಲ್ಲ. 2017-18ರ ಬಳಿಕ ಪ್ರಕರಣದಲ್ಲಿ ಪಿತೂರಿ ಮಾಡಿದವರ ಹೆಸರು ಸೇರಿಸಲು ಆರಂಭಿಸಿದ ನಂತರ ಕೊಲೆಗಳ ಸರಣಿ ನಿಂತಿತು’ ಎಂದು ಹೇಳಿದರು.


‘2013ರಿಂದ 2018ರವರೆಗೂ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 23 ಹಿಂದೂ ಯುವಕರ ಕೊಲೆ ಆಗಿದೆ ಎಂದು ರಾಜ್ಯಾದ್ಯಂತ ಅಪಪ್ರಚಾರ ಮಾಡಿಕೊಂಡು ಓಡಾಡಿದ್ದರು. ಇದೀಗ ಮತ್ತೆ ಕೊಲೆಗಳು ಆರಂಭವಾಗಿದ್ದು, ಕಳೆದ ಮೂರು ವರ್ಷಗಳಿಂದ ಇವರೇ ಆಡಳಿತ ಮಾಡುತ್ತಿದ್ದಾರೆ. ಏಕೆ ರೀತಿ ಕೊಲೆಗಳು ನಡೆಯುತ್ತಿವೆ’ ಎಂದು ಪ್ರಶ್ನಿಸಿದರು.

Join Whatsapp