ಕಾವೇರಿ ವಿಚಾರವಾಗಿ ಸರ್ವ ಪಕ್ಷ ನಿಯೋಗ ಭೇಟಿಗೆ ಕೇಂದ್ರ ಸಮಯ ಕೊಡುತ್ತಿಲ್ಲ: ಡಿಕೆ ಶಿವಕುಮಾರ್

Prasthutha|

ಬೆಂಗಳೂರು: ಕಾವೇರಿ ನೀರು ವಿಚಾರವಾಗಿ ಸುಪ್ರೀಂಕೋರ್ಟ್ ಗೆ ಮತ್ತೆ ಅರ್ಜಿ ಸಲ್ಲಿಕೆ ಮಾಡುತ್ತೇವೆ ಎಂದು ಜಲ ಸಂಪನ್ಮೂಲ ಸಚಿವ ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಕಾವೇರಿ ನೀರಾವರಿ ಬೋರ್ಡ್ ಸಭೆ ಸಂಬಂಧ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮಳೆಯಿಲ್ಲದೆ ದೊಡ್ಡ ಕಷ್ಟ ಆಗಿದೆ. 180 ಕ್ಕೂ ಹೆಚ್ಚು ತಾಲೂಕುಗಳನ್ನು ಬರ ತಾಲೂಕು ಎಂದು ಘೋಷಣೆ ಮಾಡಿದ್ದೇವೆ. ಇವತ್ತು ಕಾವೇರಿ ಬೋರ್ಡ್ ಸಭೆ ಇದೆ. ಬೋರ್ಡ್ ಮುಂದೆ ವಾಸ್ತವಿಕ ಅಂಶ ತಿಳಿಸುತ್ತೇವೆ ಎಂದರು.

- Advertisement -

ನಾನು ಈಗಾಗಲೇ ಕೇಂದ್ರ ಸಚಿವರನ್ನು ಭೇಟಿಯಾಗಿದ್ದೇನೆ. ಸಿಎಂ ಬರೆದ ಪತ್ರವನ್ನು ತಲುಪಿಸಿ ಚರ್ಚೆ ಮಾಡಿದ್ದೇನೆ. ನೀವು ಮಧ್ಯ ಪ್ರವೇಶ ಮಾಡಬೇಕು ಅಂತ ಕೇಳಿದ್ದೇನೆ. ಸಂಸತ್ ನಡೆಯೋ ಸಮಯದಲ್ಲಿ ಸಂಸದರು ಹೋಗಿ ಭೇಟಿ ಮಾಡೋ ಕಾರ್ಯಕ್ರಮ ಹಾಕಿಕೊಂಡಿದ್ದೇವೆ. ಸರ್ವ ಪಕ್ಷ ನಿಯೋಗ ಕರೆದುಕೊಂಡು ಹೋಗಲು ಅವರು ಸಮಯ ಕೊಟ್ಟಿಲ್ಲ. ತಮಿಳುನಾಡಿನವರು ಅವರದೇ ಆದ ನಿಲುವನ್ನು ತಾಳಿದ್ದಾರೆ. ನಾವು ನಮ್ಮ ಜನರನ್ನು ಕಾಪಾಡಬೇಕು. ಕೋರ್ಟ್ಗೆ ಹೋಗ್ತೀವಿ ಎಂದರು.



Join Whatsapp