ಚೈತ್ರಾ ಕುಂದಾಪುರ ವಂಚನೆ ಕೇಸ್: ಸೂಲಿಬೆಲೆ ಹೆಸರು ಪ್ರಸ್ತಾಪಿಸಿದ ಸ್ವಾಮಿ

Prasthutha|

ಬೆಂಗಳೂರು: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಚೈತ್ರಾ ಕುಂದಾಪುರ ಮತ್ತು ಗ್ಯಾಂಗ್ ವಂಚನೆ ಎಸಗಿದ ಪ್ರಕರಣ ಸಂಬಂಧ ಅಭಿನವ ಹಾಲಶ್ರೀ ಹೆಸರಿನ ಬೆನ್ನಲ್ಲೇ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೆಸರು ಮತ್ತು ಚಕ್ರವರ್ತಿ ಸೂಲಿಬೆಲೆ ಹೆಸರು ಕೇಳಿಬಂದಿದೆ.

- Advertisement -


ಈ ಬಗ್ಗೆ ಮಾತನಾಡಿದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮಿ, ನಮ್ಮ ಹೆಸರು ಉಲ್ಲೇಖವಾದಾಗ ಎಲ್ಲಾ ಘಟನೆಯನ್ನು ಹೇಳಬೇಕಾಗುತ್ತದೆ. ನನಗೆ ಚೈತ್ರಾ ಕುಂದಾಪುರ ವಿಷಯ ತಿಳಿದಾಗ ಚಕ್ರವರ್ತಿ ಸೂಲಿಬೆಲೆ ಅವರನ್ನ ಸಂಪರ್ಕಿಸಿದೆ. ಆದರೆ ಅವರು ಈ ವಿಷಯ ಮೊದಲೇ ಗೊತ್ತಿದೆ ಎಂದು ಹೇಳಿದರು. ಚುನಾವಣೆಯಾದ ಒಂದು ತಿಂಗಳ ನಂತರ ಅಂದ್ರೆ ಬಹುಶಃ ಆಗಸ್ಟ್ ನಲ್ಲಿ ಚಕ್ರವರ್ತಿ ಸೂಲಿಬೆಲೆ ಜೊತೆ ಮಾತನಾಡಿದೆ. ಡೀಲ್ ಕೇಸ್ ನಲ್ಲಿ ನನ್ನ ಹೆಸರು ಬಂದಿದೆಯಾ ಎಂದು ನಕ್ಕರು. ಇದು ತುಂಬಾ ಸಮಯದಿಂದ ಈ ಸುದ್ದಿ ಹರಿದಾಡುತ್ತಿದೆ. ಸಿ ಟಿ ರವಿ ಜೊತೆಯಲ್ಲಿಯೂ ಜೊತೆ ಮಾತನಾಡಿದ್ದೇನೆ. ನಾನು ಹೇಳುವ ಮೊದಲೇ ಸೂಲಿಬೆಲೆ ಅವರಿಗೆ ಈ ವಿಷಯ ಗಮನಕ್ಕೆ ಬಂದಿತ್ತು ಎಂದರು.