SDPI ಸುರತ್ಕಲ್ ಬ್ಲಾಕ್ ವತಿಯಿಂದ ವಿಷೇಶ ಸಭೆ: ತೆರವಾದ ಸ್ಥಾನಕ್ಕೆ ಪದಾಧಿಕಾರಿಗಳ ಆಯ್ಕೆ

Prasthutha|

ಸುರತ್ಕಲ್ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುರತ್ಕಲ್ ಬ್ಲಾಕ್ ಸಮಿತಿಯ ವಿಷೇಶ ಸಭೆಯು ಸುರತ್ಕಲ್ ಬ್ಲಾಕ್ ಅಧ್ಯಕ್ಷ ಸಲಾಂ ಕಾನ ರವರ ಅಧ್ಯಕ್ಷತೆಯಲ್ಲಿ ಚೊಕ್ಕಬೆಟ್ಟು ಕ್ಷೇತ್ರ ಸಮಿತಿ ಕಛೇರಿಯಲ್ಲಿ ನಡೆಯಿತು.

- Advertisement -

ಬ್ಲಾಕ್ ಸಮಿತಿಯ ತೆರವಾದ ಸ್ಥಾನಕ್ಕೆ ಪದಾಧಿಕಾರಿಗಳನ್ನು ಆಂತರಿಕ ಚುಣಾವಣೆಯ ಮೂಲಕ ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಶಬೀರ್ ಕೃಷ್ಣಾಪುರ, ಜೊತೆ ಕಾರ್ಯದರ್ಶಿಯಾಗಿ ಬಶೀರ್ ಕಾನ, ಕೋಶಾಧಿಕಾರಿಯಾಗಿ ಅಮೀನ್ ಚೊಕ್ಕಬೆಟ್ಟು ಆಯ್ಕೆಯಾದರು

- Advertisement -

ಚುಣಾವಣಾ ಪ್ರಕ್ರಿಯೆಯನ್ನು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಉಸ್ಮಾನ್ ಗುರುಪುರ ಮತ್ತು ಉಪಾಧ್ಯಕ್ಷ ನಾಸಿರ್ ಉಳಾಯಿಬೆಟ್ಟು ನಡೆಸಿಕೊಟ್ಟರು.

ಈ ಸಂಧರ್ಭದಲ್ಲಿ ಕ್ಷೇತ್ರ ಸಮಿತಿ ಕಾರ್ಯದರ್ಶಿ ನೂರುಲ್ಲಾ ಕುಳಾಯಿ, ಜೊತೆ ಕಾರ್ಯದರ್ಶಿ ಅಝರ್ ಚೊಕ್ಕಬೆಟ್ಟು ಹಾಗೂ ಬ್ಲಾಕ್ ಮತ್ತು ವಾರ್ಡ್ ನಾಯಕರು ಉಪಸ್ಥಿತರಿದ್ದರು.