ಸೈಬರ್ ವಂಚನೆ ವಿರುದ್ಧ ಸಿಬಿಐ ಬೃಹತ್ ಕಾರ್ಯಾಚರಣೆ : ದೇಶಾದ್ಯಂತ 105 ಸ್ಥಳಗಳಲ್ಲಿ ದಾಳಿ

Prasthutha|

ನವದೆಹಲಿ: ದೇಶಾದ್ಯಂತ ನಡೆಯುತ್ತಿರುವ ಸೈಬರ್ ವಂಚನೆ ವಿರುದ್ಧದ ಬೃಹತ್ ಕಾರ್ಯಾಚರಣೆಯಲ್ಲಿ, ಭಾರತದಾದ್ಯಂತ 105 ಸ್ಥಳಗಳಿಗೆ ಸಿಬಿಐ ದಾಳಿ ನಡೆಸಿದೆ. ಸಿಬಿಐ ಮತ್ತು ಆಯಾ ರಾಜ್ಯ ಪೊಲೀಸರು ನಡೆಸಿದ ಈ ಕಾರ್ಯಾಚರಣೆಗೆ ʼಆಪರೇಶನ್ ಚಕ್ರʼ ಎಂದು ಕರೆಯಲಾಗಿದೆ.

- Advertisement -

ಭಾರತದಲ್ಲಿನ ಕೆಲವು ಕಾಲ್ ಸೆಂಟರ್ಗಳು ಅಮೆರಿಕದಲ್ಲಿರುವ ಜನರಿಗೆ ತಮ್ಮ ಹಣದ ಬಗ್ಗೆ ನಕಲಿ ಕರೆಗಳ ಮೂಲಕ ವಂಚಿಸುತ್ತಿವೆ ಎಂದು ಅಮೆರಿಕಾದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್, (ಎಫ್ಬಿಐ) ಇಂಟರ್ಪೋಲ್ ಗೆ ದೂರು ನೀಡಿತ್ತು. ಈ ದೂರಿನ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆಸಲಾಗಿದೆ.

ದೆಹಲಿಯ ,ಅಂಡಮಾನ್- ನಿಕೋಬಾರ್, ಪಂಜಾಬ್, ಚಂಡೀಗಢ, ರಾಜಸ್ಥಾನ, ಅಸ್ಸಾಂ ಮತ್ತು ಕರ್ನಾಟಕ ಸೇರಿ ದೇಶಾದ್ಯಂತ 87 ಸ್ಥಳಗಳಲ್ಲಿ ಸಿಬಿಐ ಶೋಧ ನಡೆಸಿದೆ.  18 ಸ್ಥಳಗಳಲ್ಲಿ ರಾಜ್ಯ ಪೊಲೀಸರ ಮೂಲಕ  ಶೋಧ ನಡೆಸಲಾಗಿದೆ.

- Advertisement -

ಪುಣೆ ಮತ್ತು ಅಹಮದಾಬಾದ್ನಲ್ಲಿ ಅಮೆರಿಕದ ಪ್ರಜೆಗಳನ್ನು ಗುರಿಯಾಗಿಸಿಕೊಂಡ ಎರಡು ಕಾಲ್ ಸೆಂಟರ್ಗಳನ್ನು ಭೇದಿಸಲಾಗಿದೆ ಎಂದು ತಿಳಿದು ಬಂದಿದೆ. ರಾಜಸ್ಥಾನದ ಒಂದು ಸ್ಥಳದಿಂದ ಸಿಬಿಐ ₹ 1.5 ಕೋಟಿ ನಗದು ಮತ್ತು ಒಂದೂವರೆ ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದೆ.

ಈ ಕಾರ್ಯಾಚರಣೆ ವೇಳೆ ಅಪಾರ ಪ್ರಮಾಣದ ಡಿಜಿಟಲ್ ಸಾಕ್ಷ್ಯಗಳು, ₹1.5 ಕೋಟಿ ನಗದು ಮತ್ತು 1.5 ಕೆಜಿ ಚಿನ್ನ ಪತ್ತೆಯಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

Join Whatsapp