ಕಾವೇರಿ ಹೋರಾಟ: ಸೆ.26 ರಂದು ‘ಬೆಂಗಳೂರು ಬಂದ್’

Prasthutha|

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಸೆ.26ಕ್ಕೆ ಬೆಂಗಳೂರು ನಗರ ಬಂದ್ ಗೆ ವಿವಿಧ ಸಂಘಟನೆಗಳು ಕರೆ ನೀಡಿವೆ.

- Advertisement -


ಈ ಬಗ್ಗೆ ಮಾಹಿತಿ ನೀಡಿದ ರೈತ ಮುಖಂಡ ಕುರುಬೂರು ಶಾಂತಕುಮಾರ್, ಕಾವೇರಿ ವಿಚಾರದಲ್ಲಿ ರಾಜ್ಯದ ರೈತರಿಗೆ ಬ್ರಿಟೀಷರ ಕಾಲದಿಂದಲೂ ಅನ್ಯಾಯವಾಗುತ್ತಿದೆ. ಹೀಗಾಗಿ, ಇದನ್ನು ಖಂಡಿಸಿ ಸೆ.26ರ ಮಂಗಳವಾರದಂದು ಬೆಂಗಳೂರು ಬಂದ್ ನಡೆಯಲಿದೆ. ಎಲ್ಲ ಶಾಲಾ-ಕಾಲೇಜು, ಸಂಸ್ಥೆಗಳು, ಕಾರ್ಮಿಕ ಸಂಘಟನೆಗಳು, ಹಾಗೂ ನಾಗರಿಕರು ಬೆಂಬಲ ನೀಡಬೇಕು ಎಂದು ತಿಳಿಸಿದ್ದಾರೆ.

Join Whatsapp