ಮಣಿಪುರದಲ್ಲಿ ಇಂಟರ್ ನೆಟ್ ನಿರ್ಬಂಧ ತೆರವು: ಮುಖ್ಯಮಂತ್ರಿ ಬಿರೇನ್ ಸಿಂಗ್

Prasthutha|

ಇಂಫಾಲ್: ಮಣಿಪುರ ಹಿಂಸಾಚಾರದಿಂದ ಅಲ್ಲಿನ ಇಂಟರ್ನೆಟ್ ವ್ಯವಸ್ಥೆಯನ್ನು ನಿರ್ಬಂಧ ಮಾಡಲಾಗಿತ್ತು. ಇದೀಗ ರಾಜ್ಯ ಯಥಾಸ್ಥಿತಿಗೆ ಬಂದ ಕಾರಣ ಈ ನಿರ್ಬಂಧವನ್ನು ತೆರವು ಮಾಡಲಾಗಿದೆ ಎಂದು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಹೇಳಿದ್ದಾರೆ.

- Advertisement -

ಮೇ 3ರಂದು ಜನಾಂಗೀಯ ಘರ್ಷಣೆಗಳು ಭುಗಿಲೆದ್ದು, ನಂತರ ಅದು ವಿಕೋಪಕ್ಕೆ ಹೋಗಿ ಹಲವು ಅಹಿತಕರ ಘಟನೆಗಳು ನಡೆದು ಇಡೀ ರಾಜ್ಯವೇ ಬೂದಿ ಮುಚ್ಚಿದ ಕೆಂಡದಂತಾಗಿತ್ತು. ಅಲ್ಲಿನ ಅನೇಕರು ಮನೆ-ಪ್ರಾಣ ಎಲ್ಲವನ್ನು ಕಳೆದುಕೊಂಡಿದ್ದರು. ಇನ್ನು ಸಾಮಾಜಿಕ ಜಾಲತಾಣದಲ್ಲಿ ಮಣಿಪುರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ ಮತ್ತೆ ಹಿಂಸಾಚಾರಕ್ಕೆ ಕಾರಣವಾಗುತ್ತಿತ್ತು. ಈ ಪುಕಾರುಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಇಂಟರ್ನೆಟ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಿತ್ತು. ಇದೀಗ ಮಣಿಪುರ ಯಥಾಸ್ಥಿತಿಗೆ ಬಂದ ಕಾರಣ ಈ ಕ್ರಮವನ್ನು ತೆರವುಗೊಳಿಸಲಾಗಿದೆ.

Join Whatsapp