ಕ್ಯಾಸೆಟ್ ಟೇಪ್ ಜನಕ ಲೂ ಓಟ್ಟೆನ್ಸ್ ನಿಧನ

Prasthutha|

ಆಮ್ಸ್ಟರ್‌ಡ್ಯಾಮ್: ಕ್ಯಾಸೆಟ್ ಟೇಪ್‌ ಕಂಡು ಹಿಡಿದ ಲೂ ಓಟ್ಟೆನ್ಸ್ ನಿಧನರಾಗಿದ್ದಾರೆ. 94 ವರ್ಷ ವಯಸ್ಸಾದ ಅವರು ವಯೋ ಸಹಜ ಖಾಯಿಲೆಗಳಿಂದ ಬಳಲುತ್ತಿದ್ದರು.

- Advertisement -

ಆಡಿಯೊ ಕ್ಯಾಸೆಟ್‌ ನೊಂದಿಗೆ ಸಿಡಿಯ ಸಂಶೋಧನೆಯಲ್ಲೂ ಡಚ್ ಎಂಜಿನಿಯರ್ ಓಟ್ಟೆನ್ಸ್ ಪಾತ್ರವಿದೆ. 1926 ರಲ್ಲಿ ಬೆಲ್ಲಿಂಗ್‌ವೊಲ್ಡೆಯಲ್ಲಿ ಜನಿಸಿದ ಓಟ್ಟೆನ್ಸ್ 1952 ರಲ್ಲಿ ಬೆಲ್ಜಿಯಂನ ಫಿಲಿಪ್ಸ್ ಕಾರ್ಖಾನೆಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಎಂಜಿನಿಯರಿಂಗ್ ಪದವೀಧರರಾಗಿದ್ದ ಅವರನ್ನು 1960 ರಲ್ಲಿ ಫಿಲಿಪ್ಸ್ ಪ್ರೊಡಕ್ಟ್ ಡೆವಲಪ್‌ಮೆಂಟ್ ವಿಭಾಗದ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ದೊಡ್ಡ ರೀಲ್‌ಗಳಲ್ಲಿ ಹಾಡುಗಳನ್ನು ಹಾಡುವ ಟೇಪ್ ರೆಕಾರ್ಡ್‌ಗಳಿಂದ ಓಟ್ಟೆನ್ಸ್ ಬೇಸತ್ತಿದ್ದರು. ನಂತರ ಅವರು ಬಹಳ ಸಣ್ಣ ಮತ್ತು ಬಳಕೆದಾರ ಸ್ನೇಹಿ ರೆಕಾರ್ಡರ್ ಕಂಡುಹಿಡಿದು ಒಂದು ವರ್ಷದೊಳಗೆ ಆಡಿಯೊ ಕ್ಯಾಸೆಟ್ ತಯಾರಿಸಿ ಬಿಡುಗಡೆ ಮಾಡಿದ್ದರು.

1963 ರಲ್ಲಿ ರೇಡಿಯೋ ಎಲೆಕ್ಟ್ರಾನಿಕ್ಸ್ ಮೇಳದಲ್ಲಿ ಅವರ ಕ್ಯಾಸೆಟ್ ಅನ್ನು ಪ್ರಸ್ತುತಪಡಿಸಲಾಯಿತು. ಓಟ್ಟೆನ್ಸ್ ಕ್ಯಾಸೆಟ್ ಅನ್ನು ಪರಿಚಯಿಸಿದ ನಂತರ, ಜಪಾನ್ ಕೂಡ ಕ್ಯಾಸೆಟ್ ಅನ್ನು ತಯಾರಿಸಿತು. ಕ್ಯಾಸೆಟ್‌ಗಾಗಿ ಸೋನಿ ಜೊತೆಗಿನ ಫಿಲಿಪ್ಸ್ ಒಪ್ಪಂದವು ಒಟ್ಟೆನ್ಸ್ ಅವರನ್ನು ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಳಿಸಿತು. 1963 ರಲ್ಲಿ ಮಾರುಕಟ್ಟೆಗೆ ಬಿಡುಗಡೆಯಾದಾಗ 100 ಬಿಲಿಯನ್ ಕ್ಯಾಸೆಟ್‌ಗಳು ಮಾರಾಟವಾದವು.

- Advertisement -

ಫಿಲಿಪ್ಸ್ ಮತ್ತು ಸೋನಿ ರೂಪಿಸಿದ ಸಿಡಿಯ ಪ್ರಯೋಗಗಳಲ್ಲೂ ಅವರು ಭಾಗಿಯಾಗಿದ್ದಾರೆ. 1979 ರಲ್ಲಿ ಸಿಡಿ ಯನ್ನು ಬಿಡುಗಡೆ ಮಾಡಲಾಯಿತು. ನಂತರ ಲೂ ಓಟ್ಟೆನ್ಸ್ 1986 ರಲ್ಲಿ ನಿವೃತ್ತರಾದರು. ತಾನು ಮತ್ತು ತನ್ನ ಸಹೋದ್ಯೋಗಿಗಳು 1960 ರ ದಶಕದಲ್ಲಿ ಕ್ಯಾಸೆಟ್ ಸಂಶೋಧನೆ ನಡೆಸುತ್ತಿರುವಾಗ ಅಷ್ಟೊಂದು ಜನಪ್ರಿಯವಾಗಿ ಐತಿಹಾಸಿಕ ಮಹತ್ವ ಪಡೆಯಬಹುದೆಂದು ಗೊತ್ತಿರಲಿಲ್ಲ ಎಂದು ದಶಕಗಳ ನಂತರ ಓಟ್ಟೆನ್ಸ್ ಪ್ರತಿಕ್ರಿಯಿಸಿದ್ದರು.



Join Whatsapp