ತಬ್ಲೀಗ್ ಜಮಾಅತ್: 20 ವಿದೇಶಿಯರ ವಿರುದ್ಧ ಆರೋಪಗಳನ್ನು ಕೈಬಿಡಲು ಮುಂದಾದ ಮುಂಬೈ ಪೊಲೀಸ್

Prasthutha|

ನವದೆಹಲಿ: ಅಂಧೇರಿಯ ತಬ್ಲೀಗ್ ಜಮಾಅತ್‌ಗೆ ಸಂಬಂಧಿಸಿದ 20 ವಿದೇಶಿ ಪ್ರಜೆಗಳ ವಿರುದ್ಧ ದಾಖಲಿಸಲಾಗಿದ್ದ 2 ಪ್ರಕರಣಗಳನ್ನು ಕೈಬಿಡಲಾಗುವುದು ಎಂಬುದಾಗಿ ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾಗಿ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಈ ತಬ್ಲೀಗಿ ವಿದೇಶಿಯರ ಮೇಲೆ ನರಹತ್ಯೆ, ಕೊಲೆ ಮತ್ತು ಕೊಲೆ ಯತ್ನ ಪ್ರಕರಣಗಳನ್ನು ದಾಖಲಿಸಲಾಗಿತ್ತು.

- Advertisement -

ಏಪ್ರಿಲ್ ನಲ್ಲಿ, ಡಿಎನ್ ನಗರ ಪೊಲೀಸ್ ಠಾಣೆಯಲ್ಲಿ 10 ಇಂಡೋನೇಷ್ಯಾ ಪ್ರಜೆಗಳು ಮತ್ತು 10 ಕಿರ್ಗಿಜ್ (ಕಿರ್ಗಿಸ್ತಾನ್ ) ಪ್ರಜೆಗಳ ವಿರುದ್ಧ ಎರಡು ಎಫ್ಐಆರ್ ದಾಖಲಿಸಲಾಗಿತ್ತು. ದಿಂಡೋಶಿ ಸೆಷನ್ಸ್ ನ್ಯಾಯಾಲಯದ ಹೆಚ್ಚುವರಿ ಪ್ರಧಾನ ನ್ಯಾಯಾಧೀಶರು ತಮ್ಮ ವಿಸರ್ಜನಾ ಅರ್ಜಿಗಳ ವಿಚಾರಣೆಯನ್ನು ಒಂದು ತಿಂಗಳೊಳಗೆ ತೀರ್ಮಾನಿಸಬೇಕು ಎಂದು, ವಿದೇಶಿ ಪ್ರಜೆಗಳ ಮನವಿಯ ವಿಚಾರಣೆಯನ್ನು ಮತ್ತೊಂದು ಕೋರ್ಟ್‌ನಲ್ಲಿ ನಡೆಸಬೇಕೆಂದು ನಿರ್ದೇಶಿಸಿದೆ.

- Advertisement -