ರಿಪಬ್ಲಿಕ್ ಟಿವಿ Poll ಡಿಲೀಟ್ ಹಿನ್ನೆಲೆ : ಅರ್ನಬ್ ಗೋಸ್ವಾಮಿಯನ್ನು ಟ್ರೋಲ್ ಮಾಡಿದ ಸಲ್ಮಾನ್ ಖಾನ್ ಅಭಿಮಾನಿಗಳು

Prasthutha|

ರಿಪಬ್ಲಿಕ್ ಟಿವಿ ಸಂಸ್ಥಾಪಕ ಅರ್ನಬ್ ಗೋಸ್ವಾಮಿ, ನಟ ಸಲ್ಮಾನ್ ಖಾನ್‌ರನ್ನು ಗುರಿಯಾಗಿಸಿ ಅವಮಾನಗೊಳಿಸಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಕೋಪಗೊಂಡ ಸಲ್ಮಾನ್ ಅಭಿಮಾನಿಗಳು ಟ್ವಿಟರ್‌‌ನಲ್ಲಿ ಅರ್ನಬ್ ಗೋಸ್ವಾಮಿಯನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ.

“ನೀವು ರಿಪಬ್ಲಿಕ್ ಟಿವಿ ಪರವಾಗಿದ್ದೀರೋ” ಎಂಬ ಪೋಲ್‌ನ್ನು ಆರಂಭಿಸಿ ತದನಂತರ ತನ್ನ ಪರವಾಗಿ ಮತಗಳು ಲಭಿಸಿಲ್ಲ ಎಂಬ ಕಾರಣಕ್ಕಾಗಿ ರಿಪಬ್ಲಿಕ್ ಟಿವಿ ಡಿಲಿಟ್ ಮಾಡಿದ್ದು ಭಾರೀ ಮುಖಭಂಗಕ್ಕೆ ಗುರಿಯಾಗಿತ್ತು. ರಿಪಬ್ಲಿಕ್ ಟಿವಿ ಚಾನೆಲ್ ಪರ 49% ಮತಗಳು ಲಭಿಸಿದರೆ, ಚಾನೆಲ್‌ಗೆ ವಿರುದ್ಧವಾಗಿ 51% ಮತದಾನ ಲಭಿಸಿತ್ತು. ಲಕ್ಷಾಂತರ ಜನರು ಈ ಪೋಲ್‌ನಲ್ಲಿ ಭಾಗಿಯಾಗಿದ್ದರು.

- Advertisement -

ಈ ವಿಷಯವು ಟ್ವಿಟರ್‌‌ನಲ್ಲಿಡೀ ಟ್ರೋಲ್ ಆಗುತ್ತಿದ್ದಂತೆ, ಸಲ್ಮಾನ್ ಖಾನ್ ಅಭಿಮಾನಿಗಳು ರಂಗಪ್ರವೇಶಿಸಿದ್ದು, #ArnabDarpokHai (ಅರ್ನಬ್ ಒಬ್ಬ ಹೇಡಿ) ಎಂಬ ಹ್ಯಾಶ್‌ಟ್ಯಾಗ್ ಬಳಸಿ ಟ್ರೋಲ್‌ ಮಾಡುತ್ತಿರುವುದು ಟ್ರೆಂಡ್ ಆಗಿತ್ತು

ಈ ನಡುವೆ ‘ಬಿಗ್ ಬಾಸ್’ ರಿಯಾಲಿಟಿ ಶೋ ನಡೆಸಿಕೊಡುವ ಅತಿಥಿ ನಟ ಸಲ್ಮಾನ್ ಖಾನ್‌ರನ್ನು ರಿಪಬ್ಲಿಕ್ ಟಿವಿ ಸಂಸ್ಥಾಪಕ ಅರ್ನಬ್ ‌ಗೋಸ್ವಾಮೀ ಅವಮಾನ ಮಾಡಿದ ಬಳಿಕ ಹಳೆಯ ವಿಡಿಯೋವೊಂದರಲ್ಲಿ ಸ್ವತಃ ಅರ್ನಬ್, ನಟ ಸಲ್ಮಾನ್ ಖಾನ್ ‌ರನ್ನು ‘ದಬಂಗ್’ ಚಿತ್ರದ ನಟನೆಗಾಗಿ ಹೊಗಳಿದ ವಿಡಿಯೋ ವೈರಲ್ ಆಗುತ್ತಿದೆ.

- Advertisement -