ನಿಯಮಗಳನ್ನು ಮೀರಿ ಬಿಜೆಪಿ ಪರ ಜಾಹೀರಾತುಗಳಿಗೆ ಫೇಸ್ಬುಕ್ ಅಸ್ತು । ಕೋಟಿ ಕೋಟಿಗಳ ವ್ಯವಹಾರ !

Prasthutha|

► 2019 ರ ಚುನಾವಣೆಯಲ್ಲಿ ಬಿಜೆಪಿಯ ಏಜೆಂಟರಂತೆ ಕಾರ್ಯನಿರ್ವಹಿಸಿದ್ದ ಫೇಸ್ಬುಕ್!

- Advertisement -

ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆಯನ್ನು ಆನಂದಿಸುವ ನಾಯಕನಾಗಿ ಪ್ರಧಾನಿ ಮೋದಿಯವರು ಹೊರಹೊಮ್ಮಿದ್ದಾರೆ. ಇತರ ರಾಜಕೀಯ ಪಕ್ಷಗಳು ಫೇಸ್ಬುಕ್ ಪಾರದರ್ಶಕತೆಯ  ನಿಯಮಾವಳಿಗಳನ್ನು ಪಾಲಿಸುತ್ತಿಲ್ಲ ಎಂದು ಧ್ವನಿ ಎತ್ತಿದ ಬಳಿಕ ಫೇಸ್‌ಬುಕ್ ಯಾವ ರೀತಿ ಬಿಜೆಪಿ ಪರ ಜಾಹೀರಾತುಗಳಿಗೆ ಅನುಮತಿ ನೀಡಿದೆ ಎಂಬುವುದು ಬಯಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರನ್ನು ಉಲ್ಲೇಖಿಸಿ ಫೇಸ್ಬುಕ್ ಜಾಹೀರಾತೊಂದು ಹೀಗೆ ಹೇಳುತ್ತದೆ “ಮೋದಿ ಮೀಟರ್ ನಿಮ್ಮ ಬಗ್ಗೆ ಏನು ಹೇಳುತ್ತದೆ. ಅಗ್ರ ಸ್ಕೋರ್‌ ಗಳಿಸುವವರಿಗೆ ತಂಪಾದ ನಮೋ ಟೀ-ಶರ್ಟ್‌ಗಳನ್ನು ಗೆಲ್ಲಬಹುದು”.

- Advertisement -

2019ರಲ್ಲಿ ಭಾರತದ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಮಂತ್ರಿಯವರನ್ನು ಆಯ್ಕೆ ಮಾಡಲು ಮೊದಲ ಬಾರಿ ಮತದಾನ ಮಾಡುವವರನ್ನು ಗುರಿಯಾಗಿಸಿ ಜಾಹೀರಾತನ್ನು ಪ್ರಕಟಿಸಲಾಯ್ತು.”ನನ್ನ ಮೊದಲ ಮತ ಮೋದಿಗೆ” (My first vote for modi) ಎಂಬ ಜಾಹೀರಾತು ಪೇಸ್‌ಬುಕ್‌ನಲ್ಲಿ ರಾರಾಜಿಸಿತು. ಈ ಅಭಿಯಾನಕ್ಕೆ 1,97,778 ಡಾಲರ್‌ಗಳನ್ನು(ಸುಮಾರು 1.40 ಕೋಟಿ ರೂ.) ಬಿಜೆಪಿಯು ವ್ಯಯಿಸಿದ್ದು , ಫೇಸ್‌ಬುಕ್ ಸುಮಾರು 7,996 ಜಾಹೀರಾತುಗಳನ್ನು ಬಿಜೆಪಿ ಪರ ಪ್ರಕಟಿಸಿತು.

‘ಭಾರತ್ ಕೀ ಮನ್ ಕೀ ಬಾತ್’ ಗೆ ಬಿಜೆಪಿ 320,155 (2.25 ಕೋಟಿ ರೂ.) ಡಾಲರ್ ವ್ಯಯಿಸಿದ್ದು ಫೇಸ್‌ಬುಕ್ ಇದಕ್ಕೆ ಸಂಬಂಧಿಸಿದ 3,730 ಜಾಹೀರಾತುಗಳನ್ನು ಪ್ರಕಟಿಸಿತು. ಬಿಜೆಪಿ ‘ನಮೋ ವಿತ್ ನಮೋ’ಗೆ 173,859  ಡಾಲರ್  (1.22ಕೋಟಿ ರೂ.) ವ್ಯಯಿಸಿದರೆ ಫೇಸ್‌ಬುಕ್ 2,497 ಜಾಹೀರಾತುಗಳನ್ನು ಪ್ರಕಟಿಸಿತು. “ಫಿರ್ ಏಕ್ ಬಾರ್ ಇಮಾನ್ದಾರ್ ಸರ್ಕಾರ್” ಅಭಿಯಾನಕ್ಕೆ 37,085 ಡಾಲರ್ (26 ಲಕ್ಷ ರೂ.).) ಫೇಸ್‌ಬುಕ್ 4,765 ಜಾಹೀರಾತುಗಳನ್ನು ಪ್ರಕಟಿಸಿತು. “ಡಿಸ್ಟೊಯ್ ಫರಕ್ ಶಿವ್‌ಶಾಹಿ ಪರಾಕ್ ಗೆ 31,056 ಡಾಲರ್ ಖರ್ಚು ಮಾಡಿದ್ದರೆ, ಫೇಸ್ಬುಕ್ ಇದಕ್ಕಾಗಿ 1,748 ಜಾಹೀರಾತು ಗಳನ್ನು, ಅಘಾದಿ ಬಿಘಾಡಿಗೆ ಸಂಬಂಧಿಸಿ 19,671 ಡಾಲರ್ ಗೆ 1,074 ಜಾಹೀರಾತು,  ‘ನ್ಯೂ ಇಂಡಿಯಾ ಜಂಕ್ಷನ್’ 17,773 ಡಾಲರ್ ಗೆ 55 ಜಾಹೀರಾತುಗಳು, “ದಿ ಟ್ರೂ ಪಿಕ್ಚರ್” 14,976ಡಾಲರ್ ಗೆ 14 ಜಾಹೀರಾತುಗಳನ್ನು ಫೇಸ್‌ಬುಕ್ ಬಿಜೆಪಿ ಪರ ಪ್ರಕಟಿಸಿದೆ‌.

ಬಿಜೆಪಿ ಫೇಸ್‌ಬುಕ್ ಜಾಹೀರಾತುಗಳನ್ನು ನೀಡಲು ಒಟ್ಟು 8,12,323 ಡಾಲರ್ (5.೭೦ ಕೋಟಿ ರೂ.) ಮೊತ್ತವನ್ನು ಬಳಸಿದ್ದುಒಟ್ಟು 21,879 ಜಾಹೀರಾತುಗಳು ಫೇಸ್‌ಬುಕ್‌ನಲ್ಲಿ ಪ್ರಕಟವಾಗಿವೆ.

“ಇದು ತುಂಬಾ ಚಿಂತಾಜನಕವಾಗಿದೆ” ಎಂದು ಭಾರತೀಯ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹೇಳುತ್ತಾರೆ, ಅವರು ರಾಜಕೀಯ ಧನಸಹಾಯದಲ್ಲಿ ಹೆಚ್ಚಿನ ಪಾರದರ್ಶಕತೆ ಕೋರಿ ಅನೇಕ ಅರ್ಜಿಗಳನ್ನು ಬರೆದಿದ್ದಾರೆ. ಇಷ್ಟೊಂದು ಮೊತ್ತದ ಸಿಲ್ವರ್ ನೀಡಲು “ಅವರಿಗೆ ಯಾರು ಹಣವನ್ನು ನೀಡುತ್ತಿದ್ದಾರೆ?” ಎಂಬುದಾಗಿ ಅವರು ಪ್ರಶ್ನಿಸಿದ್ದಾರೆ.  ಪ್ರಾಯೋಜಿತ ರಾಜಕೀಯ ಜಾಹೀರಾತುಗಳನ್ನು ಪ್ರಕಟಿಸಲು ಅನುಮತಿಸುವುದಕ್ಕೂ ಮುನ್ನ ಭಾರತದ ಎಲ್ಲ ಜಾಹೀರಾತುದಾರರು ಫೇಸ್‌ಬುಕ್‌ನ ಎರಡು ಅಂಶಗಳ ದೃಢೀಕರಣ ಪ್ರಕ್ರಿಯೆಗೆ ಒಳಗಾಗಬೇಕಾಗುತ್ತದೆ ಎಂದು ಫೇಸ್‌ಬುಕ್ ಹೇಳುತ್ತದೆ. ಸರ್ಕಾರದಿಂದ ಅನುಮೋದಿತ ದಾಖಲೆಗಳ ಒಂದು ಸೆಟ್ ಮತ್ತು ವಿಳಾಸ ಮತ್ತು ಸಂಪರ್ಕಕ್ಕೆ ಲಭ್ಯವಿರುವ ಫೋನ್ ಸಂಖ್ಯೆಯನ್ನು ಪಡೆಯಲಾಗುತ್ತದೆ ಎಂದು ಫೇಸ್‌ಬುಕ್ ಹೇಳುತ್ತದೆ‌. ಆದರೆ ಮೋದಿ ಬಿಜೆಪಿ ಪರ ಜಾಹೀರಾತುಗಳನ್ನು ನೀಡುತ್ತಿರುವ ಫೊನ್ ಸಂಖ್ಯೆ ಮತ್ತು ವಿಳಾಸಗಳು ಸಂಪರ್ಕಕ್ಕೆ ಲಭ್ಯವಿಲ್ಲದವುಗಳು ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ಆದರೂ ಫೇಸ್ಬುಕ್ ನಲ್ಲಿರುವ ಪ್ರಭಾವಿಗಳ ಪ್ರಭಾವ ಬಳಸಿ ಬಿಜೆಪಿಯು ಇವೆಲ್ಲವನ್ನೂ ದಾಟಿ ಹೋಗಿದೆ ಎನ್ನುವುದು ಇಲ್ಲಿ ಗಮನಾರ್ಹವಾಗಿದೆ.

Join Whatsapp