2ನೇ ಅವಧಿಯ ಕೊನೆಯ ಬಜೆಟ್​ ಮಂಡಿಸಲಿರುವ ಮೋದಿ ಸರ್ಕಾರ

Prasthutha|

ನವದೆಹಲಿ: 2024ರ ಲೋಕಸಭಾ ಎಲೆಕ್ಷನ್​ ಕೆಲವೇ ತಿಂಗಳಲ್ಲಿ ನಡೆಯಲಿದ್ದು, ಚುನಾವಣಾ ಆಯೋಗ ದಿನಾಂಕ ಘೋಷಣೆ ಸದ್ಯದಲ್ಲೇ ಮಾಡಲಿದೆ. ಎಲೆಕ್ಷನ್​ ದೃಷ್ಟಿಯಲ್ಲಿಟ್ಟುಕೊಂಡೇ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಆಯವ್ಯಯ ಮಂಡನೆ ಮಾಡಲಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್​ ಅವರು ಫೆಬ್ರವರಿ 1ರಂದು ಪ್ರಸಕ್ತ ಸಾಲಿನ ಬಜೆಟ್​​ ಮಂಡಿಸಲಿದ್ದಾರೆ. ಕಳೆದ ಮೂರು ವರ್ಷಗಳಿಂದ ಕಾಗದ ರಹಿತ ಬಜೆಟ್​​ ಮಂಡಿಸಲಾಗುತ್ತಿದ್ದು, ಈ ಬಾರಿಯು ಪೇಪರ್​​ ಲೆಸ್​​ ಬಜೆಟ್​ ಅನ್ನು ಮಂಡಿಸಲಿದ್ದಾರೆ.

- Advertisement -

ಜನವರಿ 31ರಿಂದ ಫೆಬ್ರವರಿ 9ರವರೆಗೆ ಸಂಸತ್​​ ಬಜೆಟ್​​ ಅಧಿವೇಶನ ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮ ಜನವರಿ 31ರಂದು ಸರ್ಕಾರದ 5 ವರ್ಷಗಳ ಸಾಧನೆ ಕುರಿತು ಜಂಟಿ ಸದನದಲ್ಲಿ ಮಾತನಾಡುವ ಮೂಲಕ ಅಧಿವೇಶನ ಆರಂಭಗೊಳ್ಳಲಿದೆ.

ನಿರ್ಮಲಾ ಸೀತಾರಾಮನ್ ಅವರು ಚುನಾವಣಾ ಪೂರ್ವ ಬಜೆಟ್‌ನಲ್ಲಿ ದೇಶದ 5 ಪ್ರಮುಖ ವಿಭಾಗಗಳಾದ ಮಹಿಳೆಯರು, ಬಡವರು, ಯುವಕರು, ರೈತರು ಮತ್ತು ಬುಡಕಟ್ಟು ಜನಾಂಗದ ಕಲ್ಯಾಣ ಯೋಜನೆಗಳ ಮೇಲೆ ಕೇಂದ್ರೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.

Join Whatsapp