ಪಾಕಿಸ್ತಾನದ ‘ಜಾಯ್ ಲ್ಯಾಂಡ್’ ಸಿನಿಮಾಕ್ಕೆ ಕ್ಯಾನೆಸ್ ಜ್ಯೂರಿ ಪ್ರಶಸ್ತಿ

Prasthutha|

ವಾಷಿಂಗ್ಟನ್: ಹೊಸಬರಾದ ಸೈಮ್ ಸಾದಿಕ್ ಬರೆದು ನಿರ್ದೇಶಿಸಿರುವ ‘ಜಾಯ್ ಲ್ಯಾಂಡ್’ 75ನೇ ಕ್ಯಾನೆ ಚಲನಚಿತ್ರೋತ್ಸವದಲ್ಲಿ ಜ್ಯೂರಿ ಪ್ರಶಸ್ತಿಯನ್ನು ಶುಕ್ರವಾರ ಪಡೆಯಿತು. ಇದು ಈ ಪರ್ಯಾಯ ದ್ವೀಪದ ಮೊದಲ ಇಂಥ ಪ್ರಶಸ್ತಿ ಎನ್ನುವುದು ವಿಶೇಷ.

- Advertisement -

ಲಾಹೋರಿನ ಒಂದು ಕಠಿಣ ನಿಲುವಿನ ಪಿತೃಪ್ರಧಾನ ಕುಟುಂಬದ ಕತೆಯಿದು. ಪ್ಯಾರಿಸಿನ ಲೀಸಾ ಅಕೋಕ ಮತ್ತು ರೋಮಾನ್ ಗ್ಯೂರೆಟ್ ನಿರ್ದೇಶನದ ಫ್ರೆಂಚ್ ಸಿನಿಮಾ ಲೆಸ್ ಪೈರೆಸ್ ಎಂದರೆ ವರ್ಸ್ಟ್ ಒನ್ಸ್ ಪ್ರಶಸ್ತಿಗೆ ಮುಂಚೂಣಿಯಲ್ಲಿತ್ತು; ಕೊನೆಗೂ ಅನಿಶ್ಚಿತ ಪ್ರಶಸ್ತಿ ಗೆದ್ದಿತು.

ಲೆಸ್ ಪೈರೆಸ್ ಮಹಿಳಾ ಶೋಷಣೆಯ ಕತೆಯದ್ದಾಗಿದ್ದು ಸತತ ಎರಡನೆಯ ವರುಷವೂ ಇಂಥ ಕತೆ ಪ್ರಶಸ್ತಿ ಪಡೆಯುತ್ತಿದೆ. ಕಳೆದ ವರುಷ ಕೀರಾ ಕಿವಲೆಂಕೋರ ಅನ್ ಕ್ಲೀನ್ಚಿಂಗ್ ದ ಫಿಸ್ಟ್ಸ್ ಅನ್ ಸರ್ಟೈನ್ ರಿಗಾರ್ಡ್ ಪ್ರಶಸ್ತಿ ಗೆದ್ದಿತ್ತು.

Join Whatsapp