ಅಮೆಜಾನ್‍ ನಲ್ಲಿ ತುಳಸಿ ಬದಲಿಗೆ ಗಾಂಜಾ !

Prasthutha|

ಭೋಪಾಲ್: ಅಮೆಜಾನ್ ನಲ್ಲಿ ಸಿಹಿ ತುಳಸಿ ನೆಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.

- Advertisement -

ವಿಶಾಖಪಟ್ಟಣದ ಕಂಪನಿಯೊಂದು ಸಿಹಿ ತುಳಸಿ (ಸ್ವೀವಿಯಾ) ಎಲೆಗಳ ಉತ್ಪನ್ನ ಮಾರಾಟ ಕಂಪನಿ ಎಂದು ಹೇಳಿಕೊಂಡಿತ್ತು. ಅಮೆಜಾನ್‍ ನಲ್ಲಿ ಈ ಸಂಸ್ಥೆ ನೋಂದಾಯಿಸಿಕೊಂಡಿತ್ತು. ಆದರೆ ಸಿಹಿ ತುಳಸಿ ನೆಪದಲ್ಲಿ ಪಾರ್ಸಲ್‍ ನಲ್ಲಿ ಡ್ರಗ್ಸ್ ಸಾಗಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಮಧ್ಯಪ್ರದೇಶ ಪೊಲೀಸರು ಅಮೆಜಾನ್‍ ಗೆ ನೋಟಿಸ್ ರವಾನಿಸಿದ್ದು, ಇಂದು ವಿಚಾರಣೆ ನಡೆಯಲಿದೆ. ಈವರೆಗೆ ಕೆಲವು ಪಾರ್ಸಲ್ ಕಂಪನಿಗಳನ್ನು ಬಳಸಿಕೊಂಡು ಡ್ರಗ್ಸ್ ಪೂರೈಸುತ್ತಿದ್ದ ಪ್ರಕರಣಗಳು ವರದಿಯಾಗುತ್ತಿದ್ದವು. ಆದರೆ ಈಗ ಅಮೆಜಾನ್ ನಂಥ ಕಂಪನಿ ಮೇಲೆ ಇಂಥ ಆರೋಪ ಕೇಳಿಬಂದಿರುವುದು ಸಂಚಲನ ಮೂಡಿಸಿದೆ.



Join Whatsapp