ದೆಹಲಿ ಗಲಭೆ| ಕೋಮುವಾದದ ಬಣ್ಣ ಹಚ್ಚಬೇಡಿ ಎಂದು ವಕೀಲರಿಗೆ ಹೇಳಿದ ನ್ಯಾಯಾಲಯ

Prasthutha|

ಹೊಸದಿಲ್ಲಿ: ದೆಹಲಿ ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಮುಸ್ಲಿಮರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಿದ್ದಾರೆ ಎಂಬ ವಕೀಲರ ಹೇಳಿಕೆಯನ್ನು ದೆಹಲಿ ನ್ಯಾಯಾಲಯ ತಿರಸ್ಕರಿಸಿದ್ದು, ಗಲಭೆಗೆ ಕೋಮುವಾದದ ಬಣ್ಣ ಹಚ್ಚಬೇಡಿ ಎಂದು ಹೇಳಿದೆ.

- Advertisement -

ಈಶಾನ್ಯ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಕೇವಲ ಮುಸ್ಲಿಮರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸುತ್ತಿದ್ದಾರೆ ಎಂದು ವಕೀಲರು ವಾದಿಸಿದ್ದಾರೆ. ಗಲಭೆ ಪ್ರಕರಣದ ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಪೊಲೀಸರು ಕೇವಲ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ನಕಲಿ ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿಸಿದ್ದಾರೆ ಎಂದು ವಕೀಲರು ಹೇಳಿದರು.

ಆದರೆ ನ್ಯಾಯಾಲಯ ಈ ವಾದವನ್ನು ವಿರೋಧಿಸಿದ್ದು, ವಕೀಲರ ಹೇಳಿಕೆ ಬೇಜವಾಬ್ದಾರಿ ಮತ್ತು ಸಂಪೂರ್ಣ ತಪ್ಪು ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವೀರೇಂದ್ರ ಭಟ್ ಹೇಳಿದ್ದಾರೆ.

- Advertisement -

ಪ್ರಕರಣಗಳ ತನಿಖೆಯಲ್ಲಿ ಕೆಲವು ಲೋಪಗಳು ಆಗಿರಬಹುದು. ಆದರೆ ಆ ಲೋಪಗಳೊಂದಿಗೆ, ತನಿಖೆಯು ಅಸಮರ್ಪಕ ಮತ್ತು ಜನಾಂಗೀಯ ಎಂದು ಹೇಳಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಈ ನಡುವೆ ಗಲಭೆ ಪ್ರಕರಣಗಳ ತನಿಖೆಯಲ್ಲಿ ಪೊಲೀಸರ ವೈಫಲ್ಯವನ್ನು ಉಲ್ಲೇಖಿಸಿದ ವಿಚಾರಣಾ ನ್ಯಾಯಾಧೀಶರನ್ನು ಈ ಹಿಂದೆ ವರ್ಗಾವಣೆ ಮಾಡಲಾಗಿತ್ತು. ದೆಹಲಿ ಗಲಭೆ ಪ್ರಕರಣದಲ್ಲಿ ಪೊಲೀಸರು ಸುಳ್ಳು ಸಾಕ್ಷ್ಯ ನೀಡುತ್ತಿದ್ದಾರೆ ಎಂದು ನ್ಯಾಯಾಧೀಶ ವಿನೋದ್ ಯಾದವ್ ಹೇಳಿದ್ದರು.

2020 ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಗಲಭೆಯಲ್ಲಿ 53 ಜನರು ಸಾವನ್ನಪ್ಪಿದ್ದರು.

Join Whatsapp