ರೈತರ ಶಾಂತಿಯುತ ಪ್ರತಿಭಟನೆ ಬೆಂಬಲಿಸುವುದಾಗಿ ಪುನರುಚ್ಚರಿಸಿದ ಕೆನಡಾ ಪ್ರಧಾನಿ

Prasthutha|

ನವದೆಹಲಿ : ಭಾರತದ ವಿರೋಧದ ನಂತರವೂ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ನೀತಿ ವಿರೋಧಿಸಿ ನಡೆಯುತ್ತಿರುವ ರೈತರ ಪ್ರತಿಭಟನೆಗಳಿಗೆ ತಮ್ಮ ಬೆಂಬಲವನ್ನು ಪುನರುಚ್ಚರಿಸಿದ್ದಾರೆ.

- Advertisement -

ರಾಜತಾಂತ್ರಿಕ ಮಾತುಕತೆ ಮಧ್ಯೆ, ರೈತರ ಶಾಂತಿಯುತ ಪ್ರತಿಭಟನೆಯನ್ನು ಬೆಂಬಲಿಸುವುದಾಗಿ ಟ್ರುಡೋ ಹೇಳಿದ್ದಾರೆ. ಟ್ರುಡೊ ಅವರ ಹೇಳಿಕೆ ವಿರೋಧಿಸಿ ಕೆನಡಾದ ಹೈಕಮಿಷನರ್ ಅವರಿಗೆ ಶುಕ್ರವಾರ ಸಮನ್ಸ್ ನೀಡಿ ಕೇಂದ್ರ ಸರಕಾರ ತನ್ನ ರಾಜತಾಂತ್ರಿಕ ಪ್ರತಿಭಟನೆ ಸಲ್ಲಿಸಿತ್ತು. ಆದರೆ, ತನ್ನ ಹೇಳಿಕೆಯಿಂದ ಹಿಂದೆ ಸರಿಯದ ಟ್ರುಡೊ, ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ.

ತಮ್ಮ ಅಭಿಪ್ರಾಯದಿಂದ ಭಾರತದೊಂದಿಗಿನ ಸಂಬಂಧದ ಮೇಲೆ ಪರಿಣಾಮ ಬೀರಬಹುದೇ ಎಂದು ಕೇಳಿದಾಗ ಅದಕ್ಕೆ ಉತ್ತರಿಸಿದ ಟ್ರುಡೊ, ಕೆನಡಾ ಯಾವಾಗಲೂ ಶಾಂತಿಯುತ ಪ್ರತಿಭಟನೆ ಮತ್ತು ಮಾನವ ಹಕ್ಕುಗಳಿಗಾಗಿ ನಿಲ್ಲುತ್ತದೆ ಎಂದಿದ್ದಾರೆ.

Join Whatsapp