ಮುಂದುವರಿದ ಸಾರಿಗೆ ನೌಕರರ ಮುಷ್ಕರ | ಮೈಸೂರು ಭಾಗದಲ್ಲಿ 9 ಬಸ್ ಗಳಿಗೆ ಕಲ್ಲೆಸೆತ

Prasthutha|

 ಮೈಸೂರು : ಸಾರಿಗೆ ನೌಕರರ ಮುಷ್ಕರ ಇಂದು ಕೂಡ ಮುಂದುವರಿದಿದ್ದು, ರಾಜ್ಯಾದ್ಯಂತ ನೌಕರರ ಆಕ್ರೋಶ ತೀವ್ರಗೊಂಡಿದೆ. ಆದಾಗ್ಯೂ, ಬಂದ್ ನಡುವೆಯೂ ಬಸ್ ಸಂಚರಿಸಲು ಯತ್ನಿಸಿದ ಮೈಸೂರು ಜಿಲ್ಲೆಯ 9 ಬಸ್ ಗಳ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ವರದಿಯೊಂದು ತಿಳಿಸಿದೆ.

- Advertisement -

ಮೈಸೂರು ನಗರದ ರೂಟ್ ನಂ 68ರ ಬಸ್ ಕನಕದಾಸ ನಗರದ ಬಳಿ ಬಸ್ಸೊಂದಕ್ಕೆ ಕಲ್ಲೆಸೆಯಲಾಗಿದ್ದು, ಚಾಲಕನಿಗೆ ಗಾಯಗಳಾಗಿವೆ. ಹುಲ್ಲಹಳ್ಳಿ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಎರಡು ಬಸ್ ಗಳ ಮೇಲೆ, ಉದಯಗಿರಿ ಬಡಾವಣೆಯಲ್ಲಿ ಬಸ್ಸೊಂದರ ಮೇಲೆ ಕಲ್ಲು ತೂರಾಟ ನಡೆದಿದೆ.

ನಂಜನಗೂಡು ನಗರದ ಹೊರವಲಯದಲ್ಲಿ ಬಸ್ಸೊಂದಕ್ಕೆ ಕಲ್ಲೆಸೆತ ನಡೆದಿದೆ. ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ನಾಲ್ಕು ಬಸ್ ಗಳ ಮೇಲೆ ಮಂಡ್ಯ, ಮದ್ದೂರು, ರಾಮನಗರದಲ್ಲಿ ಕಲ್ಲೆಸೆಯಲಾಗಿದೆ.

- Advertisement -

ರಾಜ್ಯದ ವಿವಿಧೆಡೆಗಳಲ್ಲಿ ಇಂದೂ ಸಾರಿಗೆ ನೌಕರರ ಮುಷ್ಕರ ಮುಂದುವರಿದಿದೆ. ಕಳೆದೆರಡು ದಿನಗಳಿಂದ ಮಂಗಳೂರು ವಲಯದಲ್ಲಿ ಸಾರಿಗೆ ನೌಕರರು ಎಂದಿನಂತೆಯೇ ಬಸ್ ಓಡಾಟ ನಡೆಸುತ್ತಿದ್ದಾರಾದರೂ, ಇಂದು ಈ ಭಾಗದಲ್ಲೂ ಬಸ್ ಗಳು ಸ್ಥಗಿತಗೊಂಡಿವೆ. ಹೀಗಾಗಿ ಇಂದು ಸಾರಿಗೆ ಬಸ್ ಗಳಲ್ಲಿ ಓಡಾಡುವ ಪ್ರದೇಶದ ಜನರು ಪರದಾಡುವಂತಾಗಿದೆ.

ಬೆಂಗಳೂರಿನಲ್ಲಿ ಪೊಲೀಸ್ ಭದ್ರತೆಯಲ್ಲಿ ಕೆಲವು ಬಸ್ ಗಳನ್ನು ಮಾತ್ರ ಇಂದು ರಸ್ತೆಗೆ ಬಿಡಲಾಗಿದೆ. ಒಟ್ಟಿನಲ್ಲಿ ಈ ಪ್ರತಿಭಟನೆ ಎಲ್ಲಿಗೆ ತಲುಪುತ್ತದೋ ಕಾದು ನೋಡಬೇಕು.

ವಿವಿಧ ವಲಯದ ಸಂಘಟನೆಗಳಿಂದ ಬಿಜೆಪಿ ಸರಕಾರದ ವಿರುದ್ಧ ಸರಣಿ ಪ್ರತಿಭಟನೆಗಳು ನಡೆಯುತ್ತಿವೆ. ಸರಕಾರವೂ ಈ ಎಲ್ಲ ಪ್ರತಿಭಟನೆಗಳನ್ನು ತಣ್ಣಗಾಗಿಸಲು ಹರಸಾಹಸ ಪಡುತ್ತಿದೆ.  

Join Whatsapp