ಬುಲ್ಲಿ ಬಾಯಿ ಆ್ಯಪ್‌ ಆರೋಪಿ ಪೊಲೀಸ್ ಕಸ್ಟಡಿಯಲ್ಲಿ ಆತ್ಮಹತ್ಯೆಗೆ ಯತ್ನ

Prasthutha|

ಹೊಸದಿಲ್ಲಿ: ಮಹಿಳೆಯರನ್ನು ಹರಾಜು ಹಾಕಲು ಬಳಸುತ್ತಿದ್ದ ಬುಲ್ಲಿಬಾಯಿ ಆ್ಯಪ್‌ ನ ಪ್ರಮುಖ ಆರೋಪಿ ನೀರಜ್ ಬಿಷ್ಣೋಯ್ ದೆಹಲಿ ಪೊಲೀಸ್ ಕಸ್ಟಡಿಯಲ್ಲಿ ಆತ್ಮಹತ್ಯೆ ಯತ್ನಿಸಿದ್ದಾನೆ ಎಂದು ಗುಪ್ತಚರ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ಸ್ (ಐಎಫ್‌ಎಸ್‌ಒ) ವಿಶೇಷ ಘಟಕದ ಡಿಸಿಪಿ ಕೆಪಿಎಸ್ ಮಲ್ಹೋತ್ರಾ ತಿಳಿಸಿದ್ದಾರೆ.

- Advertisement -

21 ವರ್ಷದ ಆರೋಪಿ ನೀರಜ್ ಎರಡು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಹಿಳೆಯರನ್ನು ಹರಾಜು ಹಾಕುವ ‘ಸುಲ್ಲಿ ಡೀಲ್’ ಆ್ಯಪ್‌ನ ನಿರ್ಮಾಣ ಮಾಡಿದವರು ತನಗೆ ತಿಳಿದಿದೆ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಮಲ್ಹೋತ್ರಾ ಹೇಳಿದರು.

Join Whatsapp