ಹಿಮದಲ್ಲಿ ದೃಢವಾಗಿ ನಿಂತ ಯೋಧ : ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ

Prasthutha|

ಶ್ರೀನಗರ: ಕಾಶ್ಮೀರದ ಹಿಮದಲ್ಲಿ ದೃಢವಾಗಿ ನಿಂತಿರುವ ಸೇನಾ ಯೋಧರೊಬ್ಬರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದೆ.

- Advertisement -

ಕಾಶ್ಮೀರದಲ್ಲಿಗ ಭೀಕರ ಹಿಮ ಬಿರುಗಾಳಿ ಬೀಸುತ್ತಿದ್ದು, ಇದೀಗ ಮೊಣಕಾಲು ಆಳವಾದ ಹಿಮದಲ್ಲಿ ಸೇನಾ ಯೋಧರೊಬ್ಬರು ಗನ್ ಹಿಡಿದುಕೊಂಡು ದೃಢವಾಗಿ ನಿಂತಿರುವ ವೀಡಿಯೋಗೆ ನೆಟ್ಟಿಗರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಕ್ಷಣಾ ಸಚಿವಾಲಯದ ಉದಂಪುರದ ಸಾರ್ವಜನಿಕ ಸಂಪರ್ಕ ಅಧಿಕಾರಿ ಟ್ವಿಟ್ಟರ್ ನಲ್ಲಿ ವೀಡಿಯೋ ಶೇರ್ ಮಾಡಿದ್ದು, ಯಾವ ಸುಲಭದ ಭರವಸೆ ಅಥವಾ ಸುಳ್ಳುಗಳು ನಮ್ಮನ್ನು ಗುರಿಯೆಡೆಗೆ ಕರೆದುಕೊಂಡು ಹೋಗುವುದಿಲ್ಲ. ಆದರೆ ತನು ಮನ ಹಾಗೂ ಆತ್ಮ ತ್ಯಾಗವೂ ನಿಮ್ಮನ್ನು ಗುರಿಯೆಡೆಗೆ ಕರೆದೊಯ್ಯುತ್ತದೆ ಎಂದು ಬರೆದುಕೊಂಡಿದ್ದಾರೆ.

Join Whatsapp