ಮನೆ ಬಾಗಿಲಿಗೆ ಬುಲ್ ಡೋಜರ್ ತಂದು ಒತ್ತಾಯದಿಂದ ಆರೋಪಿಯನ್ನು ಶರಣಾಗಿಸುವ ಸಂವಿಧಾನ ವಿರೋಧಿ ಕ್ರಮಕ್ಕೆ ಮುಂದಾದ ಆದಿತ್ಯನಾಥ್ ಸರ್ಕಾರ

Prasthutha|

ಲಕ್ನೋ: ಮನೆ ಬಾಗಿಲಿಗೆ ಬುಲ್ ಡೋಜರ್ ತಂದು ಬೆದರಿಸಿ ಅಪರಾಧ ಪ್ರಕರಣಗಳ ಆರೋಪಿಗಳನ್ನು ಶರಣಾಗಿಸುವ ಸಂವಿಧಾನ ವಿರೋಧಿ ಕ್ರಮಕ್ಕೆ ಆದಿತ್ಯನಾಥ್ ಸರ್ಕಾರ ಮುಂದಾಗಿದೆ.

- Advertisement -

ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ವಾರದೊಳಗೆ ಇಬ್ಬರು ಆರೋಪಿಗಳ ಮನೆ ಮುಂದೆ ಬುಲ್ ಡೋಜರ್ ನಿಲ್ಲಿಸಿ ಮನೆ ಉರುಳಿಸುವುದಾಗಿ ಬೆದರಿಸಿ, ಅತ್ಯಾಚಾರ ಆರೋಪಿಗಳು ಶರಣಾಗುವಂತೆ ಮಾಡಲಾಗಿದೆ.

ಮಾರ್ಚ್ 25ರಂದು ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆಯ ದೂರಿನ ಮೇಲೆ 19 ಮತ್ತು 22ರ ಪ್ರಾಯದ ಅಮೀರ್ ಆಸಿಫ್ ಸಹೋದರರನ್ನು ಆರೋಪಿಗಳು ಎಂದು ಹೇಳಲಾಗಿತ್ತು. ಇವರ ತಂದೆ 56 ವರ್ಷ ಪ್ರಾಯದ ಶರಾಪತ್ ಸಂತ್ರಸ್ತರನ್ನು ಬೆದರಿಸುತ್ತಿದ್ದ ಎಂದು ಪ್ರಕರಣ ದಾಖಲಾಗಿದೆ.

- Advertisement -

ಗ್ರಾಮ ಪ್ರಧಾನರ ಮನೆಗೆ ತಾಕಿದಂತಿರುವ ಮನೆ. ಬುಲ್ಡೋಜರ್ ಬಳಸಿ ಮೊದಲು ಮಹಡಿ ಮೆಟ್ಟಿಲು ಉರುಳಿಸಿ ಎಚ್ಚರಿಕೆ ನೀಡಿದ್ದಾರೆ.

ಆರೋಪಿಗಳ ತಂದೆ “ಇದು ಸುಳ್ಳು ಮೊಕದ್ದಮೆ, ನಾವೇಕೆ ಶರಣಾಗಬೇಕು” ಎಂದು ಹೇಳುತ್ತಲೇ ಹೊರಬಂದರು. ತಪ್ಪಿಸಿಕೊಂಡಿದ್ದರು ಎನ್ನಲಾದ ಆ ಸಹೋದರರನ್ನು ಶುಕ್ರವಾರ ಕೊನೆಗೂ ಬಂಧಿಸಲಾಗಿದೆ.

ಇದಕ್ಕೆ ಮೊದಲು ಪ್ರತಾಪ್ ಗಡ ಜಿಲ್ಲೆಯಲ್ಲಿ ಮಹಿಳೆಯೊಬ್ಬರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 24ರ ಹರೆಯದ ಯುವಕನೊಬ್ಬನ ಮನೆ ಬುಲ್ಡೋಜ್ ಮಾಡಲಾಗಿತ್ತು. ಇದು ಸಂವಿಧಾನ ವಿರೋಧಿ ಕ್ರಮವಾದರೂ ಯೋಗಿ ರಾಜ್ಯದಲ್ಲಿ ಕಾನೂನು ಅವರ ಮತ್ತು ಪೊಲೀಸರ ಮೂಗಿನ ನೇರಕ್ಕೆ ಮಾತ್ರ ಇದೆ.

ಆರೋಪಿ ಶುಭನ್ ಮೋದನ್ ವಾಲ್. ಸಮಾಜಘಾತಕ ಶಕ್ತಿಗಳ ತಡೆ ಕಾಯ್ದೆಯಂತೆ ಪೊಲೀಸರು 15,000 ಪ್ರಕರಣಗಳನ್ನು ದಾಖಲಿಸಿದ್ದು ಉತ್ತರ ಪ್ರದೇಶದಲ್ಲಿ ಈ ಸಂಬಂಧ ಹತ್ತಾರು ಮನೆಗಳನ್ನು ಉರುಳಿಸಲಾಗಿದೆ ಎಂದು ಹೇಳಲಾಗಿದೆ.

ರಾಜಕಾರಣಿಗಳಾದ ಅತೀಕ್ ಅಹ್ಮದ್, ಮುಕ್ತಾರ್ ಅನ್ಸಾರಿ, ದಾವೂದ್ ಅಹ್ಮದ್ ರ ಮನೆಗಳನ್ನು ಸಹ ಬುಲ್ಡೋಜರ್ ಮುಖ ಮಾಡಿದ ಮನೆಗಳು ಎಂದು ಪೊಲೀಸರು ಹೇಳಿದ್ದಾರೆ.



Join Whatsapp