ಮತಾಂತರಗೊಂಡ ಮುಸ್ಲಿಮರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಅವಕಾಶ ನಿರಾಕರಿಸುತ್ತಿರುವ ಲೋಕಸೇವಾ ಆಯೋಗ

Prasthutha|

ಚೆನ್ನೈ: ತಮಿಳುನಾಡು ಲೋಕಸೇವಾ ಆಯೋಗವು (ಟಿಎನ್ ಪಿಎಸ್ ಸಿ) ಸರ್ಕಾರಿ ಉದ್ಯೋಗಗಳಲ್ಲಿ ಯಾವುದೇ ಮೀಸಲಾತಿಯನ್ನು  ಕೊಡುತ್ತಿಲ್ಲ ಎಂದು ತಮಿಳುನಾಡಿನಲ್ಲಿ ಇತರ ಧರ್ಮಗಳಿಂದ ಇಸ್ಲಾಮ್ ಗೆ ಮತಾಂತರಗೊಂಡ ಮುಸ್ಲಿಮರು ಅಳಲು ತೋಡಿಕೊಂಡಿದ್ದಾರೆ.

- Advertisement -

ಟಿಎನ್ ಪಿಎಸ್ ಸಿ ಪ್ರಕಾರ ಸರ್ಕಾರಿ ಉದ್ಯೋಗಗಳಿಗೆ ಸಾಮಾನ್ಯ ಕೋಟಾವಾಗಿರುವ ‘ಇತರರು’ ವರ್ಗದಲ್ಲಿ ಅವರನ್ನು ಹಾಕಲಾಗಿದೆ ಎಂದು ಸಮುದಾಯದ ಮುಖಂಡರು ಹೇಳಿದ್ದಾರೆ.

ಈ ವಿಚಾರವನ್ನು ತಮಿಳುನಾಡು ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಅವರ ಗಮನಕ್ಕೆ ತಂದಿದ್ದು, ಮಣಿತಾನಿಯ ಮಕ್ಕಳ್ ಕಚ್ಚಿಯ ಶಾಸಕ ಎಂ.ಎಚ್.ಜವಾಹಿರುಲ್ಲಾ, ಮದ್ರಾಸ್ ಹೈಕೋರ್ಟ್  ಮಾಜಿ ನ್ಯಾಯಮೂರ್ತಿ (ನಿವೃತ್ತ) ಜಿಎಂ ಅಕ್ಬರ್ ಅಲಿ ಅವರು ಮಾನವ ಸಂಪನ್ಮೂಲ ನಿರ್ವಹಣೆಯ ಖಾತೆಯನ್ನು ಹೊಂದಿರುವ ರಾಜ್ಯ ಹಣಕಾಸು ಸಚಿವರಿಗೆ ಈ ತಪ್ಪನ್ನು ಸರಿಪಡಿಸಲು ವಿನಂತಿಸಿದ್ದಾರೆ.

- Advertisement -

ಹಣಕಾಸು ಸಚಿವ ತ್ಯಾಗರಾಜನ್ ಸೋಮವಾರ ಚೆನ್ನೈನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಟಿಎನ್ ಪಿಎಸ್ಸಿ ಸ್ವಾಯತ್ತ ಸಂಸ್ಥೆಯಾಗಿದ್ದು, ಈ ವಿಷಯವನ್ನು ಟಿಎನ್ ಪಿಎಸ್ ಸಿಗೆ ಉಲ್ಲೇಖಿಸಿದ್ದೇನೆ ಎಂದು ಹೇಳಿದರು. ಟಿಎನ್ ಪಿಎಸ್ ಸಿಯಿಂದ ಉತ್ತರಕ್ಕಾಗಿ ಕಾಯುತ್ತಿದ್ದೇನೆ ಮತ್ತು ನಂತರ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಸಚಿವರು ಹೇಳಿದರು. ಅವರು ಯುಎಇ ಪ್ರವಾಸದಿಂದ ಹಿಂದಿರುಗಿದ ನಂತರ ಮುಖ್ಯಮಂತ್ರಿ ಸ್ಟಾಲಿನ್ ಅವರ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಲಾಗುವುದು ಎಂದು ಹೇಳಿದ್ದಾರೆ.

Join Whatsapp