ಮುಸ್ಲಿಂ ಉದ್ಯೋಗಿಗಳಿಗೆ ರಂಝಾನ್ ಸಮಯದಲ್ಲಿ ಬೇಗನೆ ಹೊರಡಲು ಅನುಮತಿ ನೀಡಿದ ತೆಲಂಗಾಣ ಸರ್ಕಾರ

Prasthutha|

ಹೈದರಾಬಾದ್: ತೆಲಂಗಾಣ ಸರ್ಕಾರವು ತನ್ನ ಮುಸ್ಲಿಂ ಉದ್ಯೋಗಿಗಳಿಗೆ ರಂಝಾನ್ ಉಪವಾಸದ ತಿಂಗಳಿನಲ್ಲಿ ಬೇಗನೆ ಹೊರಡಲು ಅನುಮತಿ ನೀಡಿದೆ.

- Advertisement -

ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಶುಕ್ರವಾರ ಆದೇಶ ಹೊರಡಿಸಿದ್ದು, ಚಂದ್ರನ ದರ್ಶನದ ಆಧಾರದ ಮೇಲೆ ಭಾನುವಾರ ಅಥವಾ ಸೋಮವಾರದಿಂದ ಪ್ರಾರಂಭವಾಗಲಿರುವ ಪವಿತ್ರ ಮಾಸದಲ್ಲಿ ಮುಸ್ಲಿಂ ಉದ್ಯೋಗಿಗಳಿಗೆ ಒಂದು ಗಂಟೆ ಮುಂಚಿತವಾಗಿ ಕಚೇರಿಗಳನ್ನು ಬಿಡಲು ಅವಕಾಶ ಮಾಡಿಕೊಟ್ಟಿದ್ದಾರೆ.

“ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮುಸ್ಲಿಂ ಸರ್ಕಾರಿ ಸೇವೆ/ಗುತ್ತಿಗೆ/ಹೊರಗುತ್ತಿಗೆ ಮಂಡಳಿಗಳ ಸಾರ್ವಜನಿಕ ವಲಯದ ನೌಕರರು/ಶಾಲೆಗಳು ತಮ್ಮ ಕಛೇರಿ/ಶಾಲೆಗಳನ್ನು ಪವಿತ್ರವಾದ ರಂಝಾನ್ ತಿಂಗಳಿನಲ್ಲಿ ಅಂದರೆ 03.04.2022 ರಿಂದ 02.05 ರವರೆಗೆ ಸಂಜೆ 4.00 ಗಂಟೆಗೆ ಬಿಡಲು ಸರ್ಕಾರವು ಈ ಮೂಲಕ ಅನುಮತಿ ನೀಡಿದೆ.” ಎಂದು ಆದೇಶದಲ್ಲಿ ತಿಳಿಸಿದೆ.

Join Whatsapp