ಸಾಲ, ಸಾರಾಯಿಗೆ ಅವಲಂಬಿತವಾದ ಬಜೆಟ್ : ಯು.ಟಿ.ಖಾದರ್ ಟೀಕೆ

Prasthutha|

- Advertisement -

ಬೆಂಗಳೂರು: ರಾಜ್ಯ ಬಜೆಟ್ ಸಾಲ ಮತ್ತು ಸಾರಾಯಿಗೆ ಅವಲಂಬಿತವಾದ ಬಜೆಟ್ ಆಗಿದೆ. ರಾಜ್ಯದ ಅಭಿವೃದ್ಧಿಗೆ ಯಾವುದೇ ದೂರದೃಷ್ಟಿ ರೂಪಿಸದೆ, ನಿಖರತೆ ಹಾಗೂ ಸ್ವಚ್ಛತೆಯಿಲ್ಲದೆ ಬಜೆಟ್ ಮಂಡಿಸಿದಂತಿದೆ. ಈ ಬಜೆಟ್ ನಿಂದ ರಾಜ್ಯ ಅಭಿವೃದ್ಧಿಯಲ್ಲಿ ಮುನ್ನಡೆಯಾಗುವ ಬದಲು ಹಿನ್ನಡೆಯಾಗಲು ಹೊರಟಂತಿದೆ ಎಂದು ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಟೀಕಿಸಿದ್ದಾರೆ.

ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕರಾವಳಿಗರು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬಹುತೇಕ ಅವಲಂಬಿಸಿದರೂ ಅವರ ವಿಶ್ವಾಸಕ್ಕೆ ಧಕ್ಕೆ ತಂದಿದೆ ಈ ಬಜೆಟ್. ಮೀನುಗಾರಿಕೆಗೆ, ರೈತರಿಗೆ, ವಿದ್ಯಾರ್ಥಿಗಳಿಗೆ ಪೂರಕವಾದ ಯಾವುದೇ ಅಂಶಗಳು ಈ ಬಜೆಟ್ ನಲ್ಲಿಲ್ಲ ಎಂದು ಯು.ಟಿ.ಖಾದರ್ ಪ್ರತಿಕ್ರಿಯಿಸಿದರು.

Join Whatsapp