ಬಜೆಟ್ ನಲ್ಲಿ ಮುಸ್ಲಿಮರ ಸಂಪೂರ್ಣ ಕಡೆಗಣನೆ: ತಾಹೇರ್ ಹುಸೇನ್ ಟೀಕೆ

Prasthutha|

ಬೆಂಗಳೂರು: ರಾಜ್ಯ ಬಜೆಟ್ ನಿರಾಶದಾಯಕವಾಗಿದೆ. ಪ್ರಧಾನಿ ಮೋದಿ ಅವರ 15 ಲಕ್ಷ ಘೋಷಣೆ ಮಾಡಿದಂತೆ ಇದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹೇರ್ ಹುಸೇನ್ ಟೀಕಿಸಿದ್ದಾರೆ.

- Advertisement -

ಈ ಬಜೆಟ್ ಅನೇಕ ಗೊಂದಲಗಳಿಂದ ಕೂಡಿದೆ. ರಾಜ್ಯ ಸರಕಾರ ರಾಜ್ಯವನ್ನು ಹೇಗೆ ಕೇಸರಿಮಯ ಮಾಡಲು ಹೊರಟಿದೆ ಅದರ ಸ್ವರೂಪ ಈ ಬಜೆಟ್ ನಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಬಜೆಟ್ ನಲ್ಲಿ 33 ಗೋಶಾಲೆಯನ್ನು 100ಕ್ಕೆ ಹೆಚ್ಚಿಸುವ ಪ್ರಸ್ತಾವನೆ ಇದೆ. ಈಗಿರುವ ಗೋಶಾಲೆಯನ್ನು ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿಲ್ಲ. ಇದರ ಮಧ್ಯೆ ಪುಣ್ಯಕೋಟಿ ದತ್ತು ಯೋಜನೆ ರೂಪಿಸಿದೆ.

ಜನ ಗೋಶಾಲೆಯಿಂದ ಗೋವು ಖರೀದಿಸುವ ಯೋಜನೆಯಾಗಿದೆ. ಈಗ ಜಾನುವಾರು ಹತ್ಯೆ ನಿಷೇಧ ಕಾಯ್ದೆಯಿಂದ ರೈತರು ತಮ್ಮ ಜಾನುವಾರು ಮಾರಾಟ ಮಾಡಲು ಸಮಸ್ಯೆ ಎದುರಿಸುತ್ತಿದ್ದಾರೆ. ಈಗ ಮತ್ತಷ್ಟು ಗೊಂದಲ ಸೃಷ್ಟಿಸುವ ಕೆಲಸವಾಗಿದೆ ಎಂದು ಅವರು ಹೇಳಿದ್ದಾರೆ.

- Advertisement -

ಅಲ್ಪಸಂಖ್ಯಾತರಿಗೆ, ಅದರಲ್ಲೂ ಮುಸ್ಲಿಮರನ್ನು ಈ ಬಜೆಟ್ ನಲ್ಲಿ ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಕ್ರಿಶ್ಚಿಯನ್ ಅಭಿವೃದ್ಧಿಗಾಗಿ 50 ಕೋಟಿ, ಜೈನ್ ಮತ್ತು ಸಿಖ್ ಸಮುದಾಯಕ್ಕೆ 50 ಕೋಟಿ ಘೋಷಿಸಲಾಗಿದೆ. ಆದರೆ ಮುಸ್ಲಿಮರಿಗೆ ಎಷ್ಟು ಹಣ ನೀಡುತ್ತಾರೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ವಕ್ಫ್ ಆಸ್ತಿ ಡ್ರೋಣ್ ಬಳಸಿ ಸರ್ವೆ ಮಾಡುವ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದ ಸಮಾಜಕ್ಕೆ ಆರ್ಥಿಕ ನೆರವು ಬರುವಂತದ್ದಲ್ಲ. ಶಾಲೆಗಳನ್ನು ಅಭಿವೃದ್ಧಿ ಪಡಿಸಿ ಎಪಿಜೆ ಅಬ್ದುಲ್ ಕಲಾಂ ಹೆಸರು ನಾಮಕರಣ ಮಾಡುತ್ತೇವೆ ಎಂದು ಹೇಳಲಾಗಿದ್ದು ಯಾವ ಶಾಲೆ, ಹೊಸ ಶಾಲೆನಾ ಅಥವಾ ಕೇವಲ ಹೆಸರು ಬದಲಾವಣೆ ಮಾಡುತ್ತಾರೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ನೀಡಿಲ್ಲ, ಒಟ್ಟಾರೆ ಈ ಬಜೆಟ್ ಸುಳ್ಳು ಭರವಸೆಗಳಿಂದ ಕೂಡಿದೆ ಎಂದು ಅವರು ಹೇಳಿದರು.

Join Whatsapp