ಅಮೆರಿಕದ ಭಾವೀ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕುರಿತ ‘ಬ್ರೌನ್ ಗರ್ಲ್ ಬ್ರೌನ್ ಗರ್ಲ್’ ಕವಿತೆ ವ್ಯಾಪಕ ವೈರಲ್

Prasthutha|

ವಾಷಿಂಗ್ಟನ್ : ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷೆಯಾಗಿ ಆಯ್ಕೆಯಾಗುತ್ತಿರುವುದು ಒಂದು ಐತಿಹಾಸಿಕ ದಾಖಲೆಯೇ ಸರಿ. ಧರ್ಮ, ಬಣ್ಣ, ಜಾತಿ ರಾಜಕಾರಣದ ಕುರಿತ ಬದಲಾದ ಮನಸ್ಥಿತಿ ವ್ಯಕ್ತವಾಗುತ್ತಿರುವ ಜಗತ್ತಿನಲ್ಲಿ, ಅಮೆರಿಕದಂತಹ ಪ್ರತಿಷ್ಠಿತ ರಾಷ್ಟ್ರದ ಉಪಾಧ್ಯಕ್ಷ ಸ್ಥಾನಕ್ಕೆ ಕಪ್ಪು ಬಣ್ಣದ ಭಾರತೀಯ ಮೂಲದ ಹೆಣ್ಣುಮಗಳು ಆಯ್ಕೆಯಾಗಿರುವುದು ಇನ್ನು ಅತ್ಯದ್ಭುತ. ಇದೀಗ ಕಮಲಾ ಹ್ಯಾರಿಸ್ ಗೆಲುವು ಜಗತ್ತಿನಾದ್ಯಂತ ಕಪ್ಪು ವರ್ಣೀಯ ಹೆಣ್ಣು ಮಕ್ಕಳಿಗೆ ಹೆಚ್ಚು ಸ್ಫೂರ್ತಿದಾಯಕವಾಗಿದೆ. ಈ ಐತಿಹಾಸಿಕ ಗೆಲುವನ್ನು ಸಂಭ್ರಮಿಸಲು ಸಿದ್ಧಗೊಂಡಿರುವ ‘ಬ್ರೌನ್ ಗರ್ಲ್, ಬ್ರೌನ್ ಗರ್ಲ್’ ಹಾಡು ಜಗತ್ತಿನಾದ್ಯಂತ ವೈರಲ್ ಆಗಿದೆ.

ಚಿಕಾಗೊ ಮೂಲದ ಕವಿ ಲೆಸ್ಲಿ ಹೊನೊರ್ ಬರೆದಿರುವ ಈ ಕವಿತೆ ಅಮೆರಿಕದ ಕಪ್ಪು ಬಣ್ಣದ ಹೆಣ್ಣು ಮಕ್ಕಳಲ್ಲಿ, ಭಾರತೀಯ ತಾಯಿ, ಜಮೈಕನ್ ತಂದೆಗೆ ಜನಿಸಿರುವ ಕಮಲಾ ಕುರಿತು ಹೊಸ ಸ್ಫೂರ್ತಿಯನ್ನು ತುಂಬಿದೆ.

- Advertisement -

“ಕಂದು ಹುಡುಗಿ ಕಂದು ಹುಡುಗಿ

ಏನು ನೋಡುತ್ತಿದ್ದೀಯಾ

ನಾನು ಉಪಾಧ್ಯಕ್ಷೆಯನ್ನು ನೋಡುತ್ತಿದ್ದೇನೆ,

ಅದೂ ಆಕೆ ನನ್ನಂತಿರುವವಳು

ಕಂದು ಹುಡುಗಿ ಕಂದು ಹುಡುಗಿ

ಏನು ಮಾಡುತ್ತಿದ್ದೀಯಾ

ನಾನು ಹೋರಾಡಿದೆ, ನಾನು ಭರವಸೆಯಿಟ್ಟೆ

ಏನು ಸತ್ಯವೋ ಅದನ್ನೇ ಮಾತನಾಡಿದೆ’’

ಹೀಗೆ ಕವನದ ಸಾಲುಗಳಿವೆ ಮತ್ತು ವಿವಿಧ ಕಮಲಾ ಕುರಿತ ವಿವಿಧ ಅಂಶಗಳನ್ನು ಬೆಳಕು ಚೆಲ್ಲುವ ಅದ್ಭುತ ಸಾಲುಗಳೊಂದಿಗೆ ಮುಂದುವರಿಯುತ್ತದೆ.  

ಲೆಸ್ಲಿ ಹೊನೊರ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಈ ಕವಿತೆಯನ್ನು ಪ್ರಕಟಿಸಿದ್ದಾರೆ. ಜೊತೆಗೆ ಕಮಲಾ ಹ್ಯಾರಿಸ್ ಅವರ ಸೋದರ ಸಂಬಂಧಿ ಮೀನಾ ಹ್ಯಾರಿಸ್ ಹಂಚಿಕೊಂಡಿದ್ದ ಫೋಟೊವನ್ನು ಹಂಚಿಕೊಂಡಿದ್ದಾರೆ. ಮೀನಾರ ಮಗಳು ಕಮಲಾ ಹ್ಯಾರಿಸ್ ಜೊತೆ ಆಟ ಆಡುವ ಫೋಟೊ ಇದಾಗಿದೆ. ನೀನೂ ದೊಡ್ಡವಳಾಗುವಾಗ ಅಧ್ಯಕ್ಷೆಯಾಗಬಹುದು ಎಂದು ಮೀನಾಳ ಮಗಳಿಗೆ ಕಮಲಾ ಈ ಫೋಟೊ ತೆಗೆಯುವ ವೇಳೆ ಹೇಳಿದ್ದರೆನ್ನಲಾಗಿದೆ.

ಬ್ರೌನ್ ಗರ್ಲ್ ಬ್ರೌನ್ ಗರ್ಲ್ ಎಂಬ ಕವಿತೆ ಮಕ್ಕಳ ಕ್ಲಾಸಿಕ್ ಪುಸ್ತರ ‘ಬ್ರೌನ್ ಬೇರ್, ಬ್ರೌನ್ ಬೇರ್, ವಾಟ್ ಡು ಯೂ ಸೀ’ ಎಂಬ ಕವಿತೆಯ ಮಾದರಿಯದ್ದಾಗಿದೆ.

ಕವಿತೆ ವೈರಲ್ ಆಗುತ್ತಿದ್ದಂತೆ, ಅದನ್ನು ಮಕ್ಕಳಿಂದ ಪಠಿಸಲು, ಹಾಡಿಸಲು ಅವಕಾಶ ಕೋರಿ ಹೊನೊರ್ ಗೆ ಸಾವಿರಾರು ಮನವಿಗಳು ಬರತೊಡಗಿದವು. ಆ ರೀತಿ ಮಕ್ಕಳಿಂದ ಪಠಿಸಿದ ವೀಡಿಯೊಗಳೂ ವ್ಯಾಪಕ ವೈರಲ್ ಆದವು. ಕೆಲವು ಶಾಲೆಗಳಲ್ಲಿ ಮಕ್ಕಳಿಗೂ ಅದನ್ನು ಕಲಿಸಲಾಯಿತು.

- Advertisement -