ಪ್ರಧಾನಿ ನರೇಂದ್ರ ಮೋದಿಗೆ ಘೋರ ಸಾವು : ಬ್ರಹ್ಮಾಂಡ ಗುರೂಜಿ ಭವಿಷ್ಯ!

Prasthutha|

ಹಾಸನ : ವಿವಾದಗಳ ಮೂಲಕವೇ ಸುದ್ದಿಯಲ್ಲಿರಲು ಬಯಸುವ ಬ್ರಹ್ಮಾಂಡ ಗುರೂಜಿ ಎಂದೇ ಖ್ಯಾತರಾಗಿರುವ ನರೇಂದ್ರ ಬಾಬು ಶರ್ಮಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹಾಸನದಲ್ಲಿ ಹಾಸನಾಂಬ ದೇವಸ್ಥಾನಕ್ಕೆ ಪೂಜೆಗೆ ಬಂದಿದ್ದ ವೇಳೆ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಂತೆಯೇ ಘೋರ ಸಾವು ಬರಬಹುದು ಎಂದು ನರೇಂದ್ರ ಶರ್ಮಾ ಹೇಳಿದ್ದಾರೆ.

- Advertisement -

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪ್ರಧಾನಿಯವರಿಗೆ ಭದ್ರತೆಯನ್ನು ಹೆಚ್ಚಿಸಬೇಕು, ಇಲ್ಲವಾದರೆ ಅಪಾಯವಿದೆ ಎಂದು ಹೇಳಿದ್ದಾರೆ. ಮುಂದಿನ ಬಾರಿ ಅವರು ಪ್ರಧಾನಿಯಾದರೂ, ಸ್ವಪಕ್ಷೀಯರೇ ಅವರಿಗೆ ಸಹಕರಿಸುವುದಿಲ್ಲ. ಸ್ವಪಕ್ಷೀಯರಿಂದಲೇ ಸಂಚು ನಡೆದಿದೆ ಎಂದು ಶರ್ಮಾ ಹೇಳಿದ್ದಾರೆ.

ಮುಂದಿನ ವರ್ಷ ಮುಖ್ಯಮಂತ್ರಿ ಬದಲಾವಣೆಯಾಗಲಿದ್ದು, ಮುಂದಿನ ಮೂರು ಮುಖ್ಯಮಂತ್ರಿಗಳು ಬರುವುದರೊಳಗೆ ರಾಜ್ಯ ಇಬ್ಭಾಗವಾಗಲಿದೆ ಎಂದೂ ಅವರು ಭವಿಷ್ಯ ನುಡಿದಿದ್ದಾರೆ. ಭಾರತದ ಆರು ಮಂದಿ ವಿದೇಶದಲ್ಲಿ ಆಳ್ವಿಕೆ ನಡೆಸುತ್ತಾರೆ ಎಂದೂ ಇದೇ ವೇಳೆ ಅವರು ತಿಳಿಸಿದ್ದಾರೆ.

- Advertisement -