ಮಸೀದಿಯಲ್ಲಿ ಹೋಮ ಮಾಡುತ್ತೇವೆ : ಸಾಧ್ವಿ ಪ್ರಾಚಿ

Prasthutha|

ಮೊರದಾಬಾದ್ : ಉತ್ತರ ಪ್ರದೇಶದ ಲಖನೌನ ಮಸೀದಿಯಲ್ಲಿ ಹೋಮ, ಹವನ ನಡೆಸಬೇಕು ಎಂದು ಬಿಜೆಪಿ ಪರ ಸಂಘಟನೆ ವಿಶ್ವ ಹಿಂದೂ ಪರಿಷತ್ (ವಿಎಚ್ ಪಿ) ನಾಯಕಿ ಸಾಧ್ವಿ ಪ್ರಾಚಿ ಹೇಳಿದ ಬಗ್ಗೆ ವರದಿಯಾಗಿದೆ. ಆದರೆ, ವಿಷಯ ವಿವಾದಾತ್ಮಕವಾಗುತ್ತಿದ್ದಂತೆ, ಹೇಳಿಕೆಯನ್ನು ಅವರು ಹಿಂಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ಮಥುರಾದ ದೇವಸ್ಥಾನವೊಂದರಲ್ಲಿ ಸೌಹಾರ್ಧತೆಯ ಉದ್ದೇಶದಿಂದ ಸಾಮಾಜಿಕ ಕಾರ್ಯಕರ್ತರೊಬ್ಬರು ನಮಾಜ್ ಮಾಡಿದ ಸುದ್ದಿ ಬಂದಿರುವ ಬೆನ್ನಲ್ಲೇ ಪ್ರಾಚಿ ಅವರ ಈ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.

- Advertisement -

“ಸಾಮಾಜಿಕ ಸೌಹಾರ್ಧತೆಯ ಹೆಸರಲ್ಲಿ, ಸಹೋದರತ್ವ ಗ್ಯಾಂಗ್ ಒಂದು ದೇವಸ್ಥಾನಗಳಿಗೆ ತೆರಳಿ, ನಮಾಜ್ ಸಲ್ಲಿಸುತ್ತದೆ. ನಾವು ಹಿಂದುಗಳು ಕೂಡ ಮಸೀದಿಗಳಲ್ಲಿ ಹೋಮ, ಹವನ ನಡೆಸಬೇಕು, ಆಗ ಸಾಮಾಜಿಕ ಸೌಹಾರ್ಧತೆ ಕಾಪಾಡಿದಂತಾಗುತ್ತದೆ’’ ಎಂದು ಪ್ರಾಚಿ ಹೇಳಿದ್ದರು.

ದೇವಸ್ಥಾನಗಳನ್ನು ಅಪವಿತ್ರಗೊಳಿಸಿ ಕಟ್ಟಲಾದ ಮಸೀದಿಗಳನ್ನು ಕೆಡವಬೇಕು ಮತ್ತು ಅಲ್ಲಿ ಹವನ ಮಾಡಬೇಕು ಎಂದು ಪ್ರಾಚಿ ಹೇಳಿರುವುದಾಗಿ ವರದಿಯಾಗಿದೆ.  

- Advertisement -