ಮಂಜೇಶ್ವರ ಮುಸ್ಲಿಮ್ ಲೀಗ್ ಶಾಸಕ ಎಂ ಸಿ ಕಮರುದ್ದೀನ್ ಬಂಧನ

Prasthutha|

► ಫ್ಯಾಶನ್ ಗೋಲ್ಡ್ ಹಗರಣ

ಕಾಸರಗೋಡು : ಫ್ಯಾಶನ್ ಗೋಲ್ಡ್ ಡೆಪಾಸಿಟ್ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಮುಸ್ಲಿಂ ಲೀಗ್ ಶಾಸಕ ಎಂ.ಸಿ. ಕಮರುದ್ದೀನ್ ಬಂಧನವಾಗಿದೆ. ಐಪಿಸಿ ಕಲಂ 420 ಮತ್ತು 34ರಡಿಯ ಆರೋಪದಲ್ಲಿ ಬಂಧನ ಮಾಡಲಾಗಿದೆ.

- Advertisement -

ಎಎಸ್ ಪಿ ವಿವೇಕ್ ಕುಮಾರ್ ನೇತೃತ್ವದ ವಿಶೇಷ ತನಿಖಾ ಸಂಸ್ಥೆ ಶಾಸಕರನ್ನು ಇಂದು ಬೆಳಗ್ಗೆ 10 ಗಂಟೆಯಿಂದ ವಿಚಾರಣೆ ನಡೆಸಿತ್ತು. ಹಗರಣ ಸಾಬೀತು ಪಡಿಸಲು ಸಾಕ್ಷ್ಯವಿರುವುದರಿಂದ ಅವರನ್ನು ಬಂಧಿಸಲಾಗಿದೆ.

800 ಮಂದಿ ಹೂಡಿಕೆದಾರರಿಗೆ 150 ಕೋಟಿ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪ ದಾಖಲಾಗಿದೆ. ಉದುಮ ಮತ್ತು ಕಾಸರಗೋಡಿನಲ್ಲಿ ಸುಮಾರು 20 ಪ್ರಕರಣಗಳು ದಾಖಲಾಗಿವೆ.

ಹೂಡಿಕೆದಾರರಿಗೆ ತಮಗೆ ಹಣ ಹಿಂದಕ್ಕೆ ಸಿಗುವುದಿಲ್ಲ ಎಂದು ಖಚಿತವಾದಾಗ, ಅವರು ದೂರು ದಾಖಲಿಸಿದ್ದರು. ಹೀಗಾಗಿ ವಿಶೇಷ ತನಿಖಾ ತಂಡ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿತ್ತು. 

- Advertisement -