ಕಾರವಾರ ನೌಕಾನೆಲೆಯಲ್ಲಿ ಬೋಟ್ ಇಂಜಿನ್’ಗೆ ಬೆಂಕಿ

Prasthutha|

ಕಾರವಾರ: ಬೋಟ್ ನ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕಕ್ಕೆ ಕಾರಣವಾದ ಘಟನೆ ಕಾರವಾರದ ಕದಂಬ ನೌಕಾನೆಲೆಯಲ್ಲಿ ನಡೆದಿದೆ. ಕಾರವಾರದ ನೌಕಾನೆಲೆಯಲ್ಲಿ ಹಡಗುಗಳನ್ನು ಡಾಕ್ ಯಾರ್ಡ್ ಗೆ ಎಳೆದು ತರುವ ತೇಜ್ ಹೆಸರಿನ ಟಗ್ ಬೋಟ್ ನ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

- Advertisement -


ಸಮುದ್ರದಿಂದ ಯುದ್ಧದ ಹಡಗನ್ನು ರಿಪೇರಿಗಾಗಿ ಎಳೆದು ತರಲು ತೆರಳಿದ್ದಾಗ ಬೋಟ್ ಇಂಜಿನ್ನಲ್ಲಿ ಸಮಸ್ಯೆ ಉಂಟಾಗಿದೆ. ಇದರಿಂದ ಇಂಜಿನ್ ಗೆ ಬೆಂಕಿ ತಗುಲಿದೆ ಎನ್ನಲಾಗಿದೆ.

Join Whatsapp