ಬಂಟ್ಟಾಳ: ವೀರಕಂಬ ಗ್ರಾಮ ಪಂಚಾಯತ್ ಕಾಂಗ್ರೆಸ್ ತೆಕ್ಕೆಗೆ

Prasthutha|

ಬಂಟ್ವಾಳ: ತಾಲೂಕಿನ ವೀರಕಂಭ ಗ್ರಾಮ ಪಂಚಾಯತ್ ನ ಎರಡನೇ ಅವಧಿಗೆ ನೂತನ ಅಧ್ಯಕ್ಷರಾಗಿ ಲಲಿತಾ ಹಾಗೂ ಉಪಾಧ್ಯಕ್ಷರಾಗಿ ಜನಾರ್ಧನ ಪೂಜಾರಿ ಆಯ್ಕೆಯಾಗಿದ್ದಾರೆ.

- Advertisement -


ವೀರಕಂಭ ಗ್ರಾಮ ಪಂಚಾಯತ್ ಒಟ್ಟು 14 ಸದಸ್ಯರನ್ನು ಹೊಂದಿದ್ದು ಈ ಪೈಕಿ 7ಮಂದಿ ಕಾಂಗ್ರೆಸ್ ಬೆಂಬಲಿತ 7ಮಂದಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸದಸ್ಯರಾಗಿದ್ದು ಎರಡು ಪಕ್ಷಗಳು ಸಮಬಲ ಹೊಂದಿತ್ತು.

ಸಮಾನ ಮತಗಳನ್ನು ಪಡೆದರಿಂದ ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು. ಎರಡನೇ ಅವಧಿಗೆ ನೂತನ ಅಧ್ಯಕ್ಷರಾಗಿ ಲಲಿತಾ ಹಾಗೂ ಉಪಾಧ್ಯಕ್ಷರಾಗಿ ಜನಾರ್ಧನ ಪೂಜಾರಿ ಆಯ್ಕೆಯಾಗಿದ್ದಾರೆ.

Join Whatsapp