ಹೊಸದಿಲ್ಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ರೈತರನ್ನು ಬೆಂಬಲಿಸಿದ್ದ ಭಾಷಣವೊಂದನ್ನು ಸಂಸದ ವರುಣ್ ಗಾಂಧಿ ಟ್ವೀಟ್ ಮಾಡಿದ್ದು ಬಿಜೆಪಿ ನಾಯಕತ್ವಕ್ಕೆ ತಲೆನೋವು ತರಿಸಿದೆ. 1980 ರ ಸಮಯದಲ್ಲಿ ರೈತ ಹೋರಾಟವನ್ನು ಬೆಂಬಲಿಸಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾಷಣವೊಂದನ್ನು ವರುಣ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ರೈತ ಹೋರಾಟವನ್ನು ಪ್ರಚೋದಿಸಿದರೆ ಪ್ರತೀಕಾರ ತೀರಿಸುವುದಾಗಿ ವಾಜಪೇಯಿ ಅವರ ಭಾಷಣವನ್ನು ಬಿಜೆಪಿಗೆ ನೆನಪಿಸಿದ್ದಾರೆ. ‘ವಿಶಾಲ ಮನಸ್ಸಿನ ನಾಯಕನ ಬುದ್ಧಿವಂತ ಮಾತುಗಳು’ಎಂಬ ಶೀರ್ಷಿಕೆಯಲ್ಲಿ ವಾಜಪೇಯಿ ಅವರ ಹಳೆಯ ಭಾಷಣವನ್ನು ಅವರು ಟ್ವೀಟ್ ಮಾಡಿದ್ದಾರೆ.
“ರೈತರನ್ನು ಬೆದರಿಸುತ್ತಿರುವ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡುತ್ತಿದ್ದೇವೆ. ನಮ್ಮನ್ನು ಹೆದರಿಸಲು ಪ್ರಯತ್ನಿಸಬೇಡಿ. ರೈತರು ಭಯಪಡುವ ಅಗತ್ಯವೂ ಇಲ್ಲ. ನಾವು ರೈತ ಹೋರಾಟವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಬಯಸುವುದಿಲ್ಲ . ಅವರನ್ನು ಬೆಬಲಿಸುತ್ತಿದ್ದೇವೆ. ಸರ್ಕಾರವು ನಿಯಮಗಳನ್ನು ದುರುಪಯೋಗಪಡಿಸಿಕೊಂಡು ರೈತರ ಶಾಂತಿಯುತ ಹೋರಾಟವನ್ನು ನಿರ್ಲಕ್ಷಿಸಲು ಪ್ರಯತ್ನಿಸಿದರೆ ನಾವು ಕೂಡ ಹೋರಾಟದ ಭಾಗವಾಗುತ್ತೇವೆ” ಎಂದು ವಾಜಪೇಯಿ ವಿಡಿಯೋದಲ್ಲಿ ಹೇಳುತ್ತಾರೆ.
ಲಖಿಂಪುರ್ ವಿಚಾರದಲ್ಲಿ ರೈತರ ಪರ ಧ್ವನಿಯೆತ್ತಿದ್ದ ವರುಣ್ ಗಾಂಧಿ, ಬಿಜೆಪಿ ಕಾರ್ಯಕಾರಿಣಿಯಿಂದ ಹೊರ ಹಾಕಲ್ಪಟ್ಟಿದ್ದರು.